
ಲಖನೌ[ಮೇ.26]: ಪ್ರದಾನಿ ನರೇಂದ್ರ ಮೋದಿಯವರು ಯಾವುದೇ ತಾರತಮ್ಯ ಮಾಡದೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅನುಕೂಲ ಕಲ್ಪಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸುದ್ದಿಮಾಧ್ಯದೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ 4 ವರ್ಷ ಪೂರೈಸಿದ್ದಕ್ಕೆ ಪ್ರಧಾನಿ ಮಂತ್ರಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಅವರು ರೂಪಿಸಿದ ಯೊಜನೆಗಳು ಯಾವುದೇ ತಾರತಮ್ಯ ಜಾತಿಯತೆ ತೋರದೆ ದೇಶದ ಕಟ್ಟಕಡೆಯ ನಾಗರಿಕನಿಗೂ ಅನುಕೂಲ ಕಲ್ಪಿಸಿದ್ದಾರೆ ಎಂದು ಪ್ರಧಾನಿಯವರನ್ನಿ ಶ್ಲಾಘಿಸಿದರು.
ಪ್ರಧಾನಿಯವರ ನಾಯಕತ್ವದಲ್ಲಿ ಭಾರತ ವಿಶ್ವದ ಶಕ್ತಿಯಾಗಿ ಪ್ರಜ್ವಲಿಸಲಿದೆ. ದೇಶದ ಜನತೆ ಬಿಜೆಪಿ ಪಕ್ಷದ ಮೇಲೆ ನಂಬಿಕೆಯಿಟ್ಟು ಅಭಿವೃದ್ಧಿಗಾಗಿ ಮುಂದಿನ ಬಾರಿ ಮೋದಿಯವರನ್ನು ಚುನಾಯಿಸುವುದು ಖಂಡಿತಾ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಡೆದು ಆಳುವ ನೀತಿಗೆ ಮತ್ತೆ ಪಾಠ
ಒಡೆದು ಆಳುವ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ 2014ರಲ್ಲಿ ಕಲಿಸಿದ ಪಾಠವನ್ನೆ ಪ್ರಜ್ಞಾವಂತ ನಾಗರಿಕರು ಮತ್ತೊಮ್ಮೆ ಕಲಿಸಲಿದ್ದಾರೆ. 2014ರ ಚುನಾವಣಾ ಪೂರ್ವ ಸಂದರ್ಭದಲ್ಲಿ ಮೋದಿಯವರು ಭ್ರಷ್ಟಾಚಾರದಲ್ಲಿ ನಿರತರಾಗಿರುವ ಯುಪಿಎ ಆಡಳಿತವನ್ನು ಕಿತ್ತೊಗೆಯುವಂತೆ ಮತದಾರರಲ್ಲಿ ಮನವಿ ಮಾಡಿ ಯಶಸ್ವಿಯು ಆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.