ನನ್ನ ಮಮ್ಮಿಯಂಥ ಮಮ್ಮಿ ಮುಂದೆ ಹುಟ್ಟಬಾರದು,ನನಗೆ ಬಂದ ಕಷ್ಟ ಯಾರಿಗೂ ಬರಬಾರದು: ಪುಟ್ಟ ಹುಡುಗಿ ಹೇಳಿದ ನೋವಿನ ಕತೆ

Published : Jan 08, 2017, 09:46 AM ISTUpdated : Apr 11, 2018, 12:58 PM IST
ನನ್ನ ಮಮ್ಮಿಯಂಥ ಮಮ್ಮಿ ಮುಂದೆ ಹುಟ್ಟಬಾರದು,ನನಗೆ ಬಂದ ಕಷ್ಟ ಯಾರಿಗೂ ಬರಬಾರದು: ಪುಟ್ಟ ಹುಡುಗಿ ಹೇಳಿದ ನೋವಿನ ಕತೆ

ಸಾರಾಂಶ

ಪತಿಯನ್ನು ತೊರೆದಿದ್ದ ಮಂಡ್ಯ ಮೂಲದ ರತ್ನ ಎಂಬಾಕೆ 6ನೇ ತರಗತಿ ಓದುತ್ತಿದ್ದ 10 ವರ್ಷದ ಮಗಳೊಂದಿಗೆ ಪ್ರತ್ಯೇಕವಾಗಿ ಮಲ್ಲಸಂದ್ರದಲ್ಲಿ ವಾಸಿಸುತ್ತಿದ್ದಳು.

ಬೆಂಗಳೂರು(ಜ.8): ಬಾಲಕಿಯೊಬ್ಬಳು ಹೆತ್ತ ತಾಯಿ ನೀಡುತ್ತಿದ್ದ ಕಷ್ಟವನ್ನು ಸಹಿಸಲಾರದೆ 'ನನ್ನ ಮಮ್ಮಿಯಂಥ ಮಮ್ಮಿ ಮುಂದೆ ಹುಟ್ಟಬಾರದು,ನನಗೆ ಬಂದ ಕಷ್ಟ ಯಾರಿಗೂ ಬರಬಾರದು' ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಿದು.

ಸ್ವಂತ ತಾಯಿಯೇ ತನ್ನ ಮಗಳನ್ನು ತನ್ನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬನ ಜೊತೆ ಮದುವೆ ಮಾಡಲು ಹೊರಟಿದ್ದಾಳೆ. ಮದುವೆಗೆ ಒಪ್ಪದ ಕಾರಣಕ್ಕಾಗಿ ತನ್ನ ಮಗಳಿಗೆ ಕೊಡಬಾರದ ಹಿಂಸೆಯನ್ನು ಸಹ ನೀಡಿದ್ದಾಳೆ. ನಗರದ ಮಲ್ಲಸಂದ್ರದಲ್ಲಿ ಘಟನೆ ನಡೆದಿದ್ದು, ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ತಾಯಿ ರತ್ನ, ಪ್ರಿಯತಮ ಮಂಜನನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಘಟನೆ ನಡೆದಿರುವುದು ಹೀಗೆ: ಪತಿಯನ್ನು ತೊರೆದಿದ್ದ ಮಂಡ್ಯ ಮೂಲದ ರತ್ನ ಎಂಬಾಕೆ 6ನೇ ತರಗತಿ ಓದುತ್ತಿದ್ದ 10 ವರ್ಷದ ಮಗಳೊಂದಿಗೆ ಪ್ರತ್ಯೇಕವಾಗಿ ಮಲ್ಲಸಂದ್ರದಲ್ಲಿ ವಾಸಿಸುತ್ತಿದ್ದಳು. ಪಾಂಡವಪುರದ ಕೊಲೆ ಪ್ರಕರಣವೊಂದರ ಆರೋಪಿಯಾದ ಮಂಜ ಎಂಬುವನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಮಂಜು ವಿರುದ್ಧ ಶ್ರೀರಂಗಪಟ್ಟಣ ಹಾಗೂ ಪಾಂಡವಪುರದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.  ಜೊತೆಗೆ ಈತನೊಂದಿಗೆ ಮಗಳನ್ನು ಕೊಟ್ಟು ವಿವಾಹ ಮಾಡಲು ನಿರ್ಧರಿಸಿ ಶಾಲೆಗೆ ಹೋದ ಬಾಲಕಿಯನ್ನು ಮಂಡ್ಯದಲ್ಲಿರುವ ತಾತ ಮೃತಪಟ್ಟಿದ್ದಾರೆಂದು ಸುಳ್ಳು ಹೇಳಿ ಮಂಡ್ಯದ ಲಾಡ್ಜ್'ನಲ್ಲಿ ಒಂದು ತಿಂಗಳ ಕಾಲ  ಇರಿಸಿಕೊಂಡು ಅನೈತಿಕ ಸಂಬಂಧ ಹೊಂದಿದ ಮಂಜನನ್ನು ಮದುವೆಯಾಗು ಎಂದು ದೈಹಿಕವಾಗಿ ಹಿಂಸಿಸಿದ್ದಾಳೆ. ಜೊತೆಗೆ ಮಾದೇಶ ಬೆಟ್ಟದಲ್ಲಿ ಮದುವೆಗೂ ಯತ್ನಿಸಿದ್ದಾರೆ. ನೆರೆ ಮನೆಯ ಅಜ್ಜಿಯ ಸಹಕಾರದಿಂದ  ಬಾಲಕಿ ತಂದೆಯ ಮಡಿಲು ಸೇರಿದ್ದಾಳೆ. ಈ ಸಂಬಂಧ ಮಾನವ ಹಕ್ಕು ಹೋರಾಟಗಾರರ ಸಹಾಯ ಪಡೆದು ಬೆಂಗಳೂರಿನ ಪೀಣ್ಯ ಠಾಣೆಗೆ ದೂರು ನೀಡಿದ್ದಾರೆ.  ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಮಗಳಿಗೆ ಮೋಸ ಮಾಡಲು ಹೊರಟ ತಾಯಿ ರತ್ನ ಪ್ರಿಯತಮ ಮಂಜನನ್ನು ಜೈಲಿಗೆ ಕಳುಹಿಸಿದ್ದಾರೆ.ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿವಮೊಗ್ಗದಲ್ಲಿ ವೀಣಾ ತ್ರಿಶತೋತ್ಸವ ಕಾರ್ಯಕ್ರಮ: ಸಂಸದ ಯದುವೀರ್ ವೀಣಾವಾದನಕ್ಕೆ ಗಾನಗಂಧರ್ವ ಲೋಕ ಸೃಷ್ಟಿ!
ಕಾಡುಗೋಡಿ ಸಿಗ್ನಲ್‌ನಲ್ಲಿ ಚಾಕು ಹಿಡಿದು ಬೆದರಿಸಿದ ಪುಂಡನಿಗೆ ಈ ಬಾರಿಯಾದರೂ ಆಗುತ್ತಾ ಕಠಿಣ ಶಿಕ್ಷೆ?