ಕೆಎಫ್‌ಸಿ ರೆಸ್ಟೋರೆಂಟ್ ಕೆಳಗೆ ಡ್ರಗ್ ಸುರಂಗ!

By Web DeskFirst Published Aug 25, 2018, 8:20 PM IST
Highlights

ಅಮೆರಿಕದಲ್ಲಿ ಪತ್ತೆಯಾಯ್ತು ಅಕ್ರಮ ಸುರಂಗ ! ಮೆಕ್ಸಿಕೋದಿಂದ ಡ್ರಗ್ಸ್ ಕಳ್ಳಸಾಗಾಣಿಕೆಗೆ ಕೊರೆದ ಸುರಂಗ! ಕೆಎಫ್‌ಸಿ ರೆಸ್ಟೋರೆಂಟ್ ಅಡಿಯಲ್ಲಿ ಪತ್ತೆಯಾಯ್ತು ಡ್ರಗ್ಸ್ ಸುರಂಗ! ಸುರಂಗ ಕಂಡು ಬೆಚ್ಚಿ ಬಿದ್ದ ಪೊಲೀಸ್ ಅಧಿಕಾರಿಗಳು

ಅರಿಜೋನಾ(ಆ.25): ಅಮೆರಿಕ ನಿಜಕ್ಕೂ ನಿಗೂಢತೆಗಳ ಆಗರ. ಅಮೆರಿಕ ಅಧ್ಯಕ್ಷರ ಭದ್ರತೆಯಲ್ಲೂ ನಿಗೂಢತೆ, ಅಮೆರಿಕ ರಕ್ಷಣಾ ಸಾಮರ್ಥ್ಯದಲ್ಲೂ ನಿಗೂಢತೆ ಅಷ್ಟೇ ಏಕೆ ಅಲ್ಲಿನ ಅಪರಾಧ ಜಗತ್ತಿನಲ್ಲೂ ಹಲವು ನಿಗೂಢತೆಗಳಿವೆ.

ಎಲ್ಲರಿಗೂ ಗೊತ್ತಿರುವಂತೆ ಅಮೆರಿಕಕ್ಕೆ ಮೆಕ್ಸಿಕೋದಿಂದ ಕಳ್ಳಸಾಗಾಣೆಯಾಗುವ ಡ್ರಗ್ಸ್ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮೆಕ್ಸಿಕೋ ಗಡಿ ಗುಂಟ ಬೃಹತ್ ಗೋಡೆ ನಿರ್ಮಾಣ ಮಾಡಿ ದೇಶವನ್ನು ಮೆಕ್ಸಿಕೋ ವಲಸಿಗರಿಂದ ಮತ್ತು ಅಲ್ಲಿಮ ಡ್ರಗ್ಸ್ ನಿಂದ ವಿಮುಕ್ತಿಗೊಳಿಸುವುದಾಗಿ ಘೋಷಿಸಿದ್ದಾರೆ.

ಆದರೆ ನೀ ಚಾಪೆ ಕೆಳಗೆ ತೂರಿದರೆ ನಾ ರಂಗೋಲಿ ಕೆಳಗೆ ತೂರುವೆ ಎಂಬ ನಾಣ್ಣುಡಿಯಂತೆ, ಟ್ರಂಪ್ ನೆಲದ ಮೇಲೆ ಗೋಡೆ ಕಟ್ಟಲು ಮುಂದಾದರೆ ಖದೀಮರು ನೆಲದೊಳಗೆ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಸುರಂಗವನ್ನೇ ತೋಡಿದ್ದಾರೆ.

ಹೌದು, ಅಮೆರಿಕದ ಅರಿಜೋನಾದಲ್ಲಿ ಪ್ರಸಿದ್ಧ ಕೆಎಫ್ ಸಿ ರೆಸ್ಟೋರೆಂಟ್ ಅಡಿಯಲ್ಲಿ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಸುರಂಗ ತೋಡಲಾಗಿದ್ದು, ಇದು ದೂರದ ಮೆಕ್ಸಿಕೋವನ್ನು ಸಂಪರ್ಕಿಸುತ್ತದೆ. ಈ ಕುರಿತು ಮಾಹಿತಿ ನೀಡಿರುವ ಯುಎಸ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ, ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡಲು ಈ ಸುರಂಗ ಕೊರೆಯಲಾಗಿತ್ತು ಎಂದು ತಿಳಿಸಿದ್ದಾರೆ.

ಈ ಸುರಂಗ ಕೊರೆಯಲು ಲಕ್ಷಾಂತರ ಯುಎಸ್ ಡಾಲರ್ ಖರ್ಚು ಮಾಡಲಾಗಿದ್ದು, ಇದರ ಮೂಲಕ ಡ್ರಗ್ಸ್ ಜೊತೆಗೆ ಅಕ್ರಮವಾಗಿ ವಲಸಿಗರನ್ನೂ ಅಮೆರಿಕಕ್ಕೆ ಕಳುಹಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

click me!