ಡೊಳ್ಳು ಹೊಟ್ಟೆ ಪೊಲೀಸರೇ ಮೊದಲು ಹೊಟ್ಟೆ ಕರಗಿಸಿಕೊಳ್ಳಿ; ಇಲ್ಲಾ ಕೆಲಸ ಕಳೆದುಕೊಳ್ಳಿ!

First Published Jul 8, 2018, 10:27 AM IST
Highlights

ಪೊಲೀಸರ ಡೊಳ್ಳು ಹೊಟ್ಟೆಯ ಬಗ್ಗೆ ತಲೆಕೆಡಿಸಿಕೊಂಡಿರುವ ಇಲಾಖೆ ಹೊಟ್ಟೆ ಕರಗಿಸಿಕೊಳ್ಳದಿದ್ದರೆ ಶಿಸ್ತು ಕ್ರಮ ಜರಗಿಸಲು ಮುಂದಾಗಿದೆ. ಡೊಳ್ಳು ಹೊಟ್ಟೆ ಪೊಲೀಸರಿಂದ ಪೊಲೀಸ್ ಇಲಾಖೆಗೆ ಮುಜುಗರ ಉಂಟಾಗುತ್ತಿದೆ. ಮುಜುಗರದಿಂದ ತಪ್ಪಿಸಿಕೊಳ್ಳಲು ಇಲಾಖೆ ಮುಂದಾಗಿದೆ. 
 
ಬೆಂಗಳೂರು (ಜು. 08): ಪೊಲೀಸ್ ಇಲಾಖೆಯಲ್ಲಿ ಕಟ್ಟು ಮಸ್ತಾದ ದೇಹ ಅಗತ್ಯ. ಕಾಲ ಕ್ರಮೇಣ ಡೊಳ್ಳು ಹೊಟ್ಟೆ ಬರೋದು ಸಾಮಾನ್ಯ. ಈಗ ಡೊಳ್ಳು ಹೊಟ್ಟೆಯೇ ಪೊಲೀಸ್ ಇಲಾಖೆಗೆ ಸವಾಲಾಗಿದೆ.  

ಪೊಲೀಸರ ಡೊಳ್ಳು ಹೊಟ್ಟೆಯ ಬಗ್ಗೆ ತಲೆಕೆಡಿಸಿಕೊಂಡಿರುವ ಇಲಾಖೆ ಹೊಟ್ಟೆ ಕರಗಿಸಿಕೊಳ್ಳದಿದ್ದರೆ ಶಿಸ್ತು ಕ್ರಮ ಜರಗಿಸಲು ಮುಂದಾಗಿದೆ. ಡೊಳ್ಳು ಹೊಟ್ಟೆ ಪೊಲೀಸರಿಂದ ಪೊಲೀಸ್ ಇಲಾಖೆಗೆ ಮುಜುಗರ ಉಂಟಾಗುತ್ತಿದೆ. ಮುಜುಗರದಿಂದ ತಪ್ಪಿಸಿಕೊಳ್ಳಲು ಇಲಾಖೆ ಮುಂದಾಗಿದೆ. 

ಈ ಸಂಬಂಧ  ಜುಲೈ 3 ರಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕೆಎಸ್‌ಆರ್‌ಪಿ 12 ಪಡೆಗಳಿವೆ. ಡೊಳ್ಳು ಹೊಟ್ಟೆ ಇರುವ ಪೊಲೀಸರ ಹೊಟ್ಟೆ ಕರಗಿಸುವ ಜವಾಬ್ದಾರಿ ಕಮಾಂಡೇಟ್‌’ಳದ್ದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. 

-[ಸಾಂದರ್ಭಿಕ ಚಿತ್ರ]

click me!