
ಬೆಂಗಳೂರು(ನ.05): ಹಣಕ್ಕಾಗಿ ಪೊಲೀಸ್ ಠಾಣೆಯಲ್ಲೇ ಕಿತ್ತಾಡಿದ ಎಸ್'ಐ ಹಾಗೂ ಪೇದೆ ಸಸ್ಪೆಂಡ್ ಆಗಿದ್ದಾರೆ. ಬೆಂಗಳೂರಿನ ಮಹದೇವಪುರ ಠಾಣೆಯಲ್ಲಿ ಪೇದೆ ಹಾಗೂ ಎಎಸ್ಐ ಕಿತ್ತಾಡಿಕೊಂಡಿದ್ರು. ಇವರಿಬ್ಬರ ರಂಪಾಟದ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಡಿಸಿಪಿ ಅಬ್ದುಲ್ ಅಹದ್, ಎಎಸ್ಐ ಅಮೃತೇಶ್ ಮತ್ತು ಪೇದೆ ಜಯಕಿರಣ್ರನ್ನು ಅಮಾನತುಗೊಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮಹದೇವಪುರ ಪೊಲೀಸರು ಗ್ಯಾಂಬ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿದ್ದರು. ಗ್ಯಾಂಬ್ಲಿಂಗ್ ದಾಳಿ ವೇಳೆ 2 ಲಕ್ಷ 61 ಸಾವಿರ ವಶಪಡಿಸಿಕೊಂಡ ಈ ಇಬ್ಬರು ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಕೇವಲ 42 ಸಾವಿರ ರುಪಾಯಿ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದರು.
ಉಳಿದ ಹಣ ಹಂಚಿಕೊಳ್ಳುವ ವಿಚಾರವಾಗಿ ಮಹದೇವಪುರ ಪೊಲೀಸ್ ಠಾಣೆಯಲ್ಲೇ ಬಡಿದಾಡಿಕೊಂಡಿದ್ದಾರೆ. ದಾಳಿಯ ವೇಳೆ ಬಂಧಿಸಲಾಗಿದ್ದ ಆರೋಪಿಗಳ ಪೈಕಿ ಕೆಲವರನ್ನು ಹೆಡ್ ಕಾನ್ಸಟೇಬಲ್ ಜಯಕಿರಣ್ ಬಿಟ್ಟು ಕಳುಹಿಸಿದ್ದಾನೆ. ಇದನ್ನು ಪ್ರಶ್ನಿಸಿದ ಇನ್ಸ್'ಪೆಕ್ಟರ್ ಅಮೃತೇಶ್'ಗೆ ಪೇದೆ ಆವಾಜ್ ಹಾಕಿದ್ದಾರೆ. ಇನ್ಸ್ಪೆಕ್ಟರ್ ಸೂಚನೆ ಮೇರೆಗೆ ಬಿಟ್ಟಿದ್ದೇನೆ ನೀನ್ಯಾವನೋ ಕೇಳೋಕೆ ಎಂದು ಆವಾಜ್ ಹಾಕಿದ್ದಾನೆ. ಮಾತಿಗೆ ಮಾತು ಬೆಳೆದು ಠಾಣೆ ಸಿಬ್ಬಂದಿ ಮುಂದೆಯೇ ಎಸ್ಐ ಹಾಗೂ ಪೇದೆ ಬಡಿದಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.