
ಲಂಡನ್(ಅ.23): ಬಲ್ಗೇರಿಯಾದಿಂದ ಬಂದಿದೆ ಎಂದು ಶಂಕಿಸಲಾದ ಟ್ರಕ್‌ವೊಂದರಲ್ಲಿ ಬರೋಬ್ಬರಿ 39 ಶವಗಳು ಪತ್ತೆಯಾಗಿದ್ದು, ಇಡೀ ಲಂಡನ್ ನಗರ ಬೆಚ್ಚಿ ಬಿದ್ದಿದೆ.
ಪೂರ್ವ ಲಂಡನ್‌ನ ಗ್ರೇಸ್ ಕೈಗಾರಿಕಾ ಪ್ರದೇಶದಲ್ಲಿ ನಿಂತಿದ್ದ ಅನಾಮಿಕ ಟ್ರಕ್‌ನ್ನು ಪೊಲೀಸರು ತೆರೆದು ನೋಡಿದಾಗ ಬರೋಬ್ಬರಿ 39 ಶವಗಳು ದೊರೆತಿವೆ ಎನ್ನಲಾಗಿದೆ.
ಈ ಕುರಿತು ಮಹಿತಿ ನೀಡಿರುವ ಎಸೆಕ್ಸ್ ಪೊಲೀಸ್ ಮುಖ್ಯಸ್ಥ ಆಂಡ್ರ್ಯೂ ಮರಿನರ್, ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕ ಹಾಗೂ ಉತ್ತರ ಐರ್ಲೆಂಡ್‌ನ 25 ವರ್ಷದ ಓರ್ವ ಯುವಕನನ್ನು ಸಂಶಯದ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಗರದ ಹೊರಗಡೆ 39 ಶವಗಳು ದೊರೆತಿರುವ ಸುದ್ದಿ ಇಡೀ ಲಂಡನ್ ನಿವಾಸಿಗರನ್ನು ಬೆಚ್ಚಿ ಬೀಳಿಸಿದ್ದು, ಬಲ್ಗೇರಿಯಾದಿಂದ ಶವಗಳನ್ನು ಹೊತ್ತ ಟ್ರಕ್ ದೇಶ ಪ್ರವೇಶಿಸಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಬೊರಿಸ್ ಜಾನ್ಸನ್, ಇದೊಂದು ದುರದೃಷ್ಟಕರ ಘಟನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತರ ಕುಟುಂಬಕ್ಕೆ ಸ್ವಾಂತ್ವನ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.