ಎಚ್ಚರ...! ನಿಮ್ಮ ಫೇಸ್'ಬುಕ್'ನ್ನು ಪೊಲೀಸರು ನೋಡ್ತಿದ್ದಾರೆ!

Published : Feb 25, 2017, 05:05 AM ISTUpdated : Apr 11, 2018, 12:34 PM IST
ಎಚ್ಚರ...! ನಿಮ್ಮ ಫೇಸ್'ಬುಕ್'ನ್ನು ಪೊಲೀಸರು ನೋಡ್ತಿದ್ದಾರೆ!

ಸಾರಾಂಶ

ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌, ವಾಟ್ಸ್‌ ಆ್ಯಪ್‌, ಟ್ವೀಟರ್‌ಗಳಲ್ಲಿ ಪ್ರಕಟವಾ ಗುವ ಆಕ್ಷೇಪಾರ್ಹ ಬರಹಗಳ ಮೇಲೆ ನಿಗಾ ಇರಿಸಲು ಕಲಬುರಗಿ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ‘ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಆ್ಯಂಡ್‌ ಟೆಕ್ನಿಕಲ್‌ ಸೆಲ್‌' ಸ್ಥಾಪಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.

ಕಲಬುರಗಿ(ಫೆ.25): ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್‌, ವಾಟ್ಸ್‌ ಆ್ಯಪ್‌, ಟ್ವೀಟರ್‌ಗಳಲ್ಲಿ ಪ್ರಕಟವಾ ಗುವ ಆಕ್ಷೇಪಾರ್ಹ ಬರಹಗಳ ಮೇಲೆ ನಿಗಾ ಇರಿಸಲು ಕಲಬುರಗಿ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ‘ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಆ್ಯಂಡ್‌ ಟೆಕ್ನಿಕಲ್‌ ಸೆಲ್‌' ಸ್ಥಾಪಿಸುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.

ಸದ್ಯದ ವ್ಯವಸ್ಥೆಯಲ್ಲೇ ಈ ಸೆಲ್‌ ಕೆಲಸ ಮಾಡ ಲಿದ್ದು, ಪೊಲೀಸರೇ ಹಲವು ಸಂಘಟನೆ, ವ್ಯಕ್ತಿಗಳು, ಗಣ್ಯರ ಸಾಮಾಜಿಕ ಜಾಲತಾಣದ ಅಕೌಂಟ್‌ಗಳ ಮೇಲೆ ಹದ್ದಿನ ಕಣ್ಣಿಡುತ್ತಿದ್ದಾರೆ. ಹೀಗಾಗಿ, ಆ ಖಾತೆಗಳ ನಿತ್ಯದ ಚಟುವಟಿಕೆ, ಅಲ್ಲಿಂದ ಅಪ್‌ಲೋಡ್‌ ಆಗುವ ಫೋಟೋ, ಮತ್ತಿತರ ಪೋಸ್ಟ್‌ಗಳ ಮಾಹಿತಿ ಪೊಲೀಸರಿಗೆ ಲಭ್ಯವಾಗಲಿದೆ.

ಜನರ ಸಂಕಷ್ಟಗಳಿಗೂ ಸ್ಪಂದನೆ:

ಕಲಬುರಗಿ ಪೊಲೀಸರ ಚಿಂತನೆ ಫಲವಾಗಿ ಹೊರಹೊಮ್ಮಿರುವ ‘ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಆ್ಯಂಡ್‌ ಟೆಕ್ನಿಕಲ್‌ ಸೆಲ್‌' ರಾಜ್ಯದ ಗಮನ ಸೆಳೆದಿದೆ. ಈ ಸೆಲ್‌ನಿಂದ ಕೇವಲ ಜಾಲತಾಣಗಳ ಜಾತಕ ಜಾಲಾಡುವುದಷ್ಟೇ ಅಲ್ಲ. ತಾವೇ ಜನರೊಂದಿಗೆ ಸಂಪರ್ಕದಲ್ಲಿರಲು ವಾಟ್ಸ್‌ಆ್ಯಪ್‌, ಫೇಸ್ಬುಕ್‌, ಟ್ವೀಟರ್‌ ಅಕೌಂಟ್‌ ರಚಿಸಿಕೊಂಡು ಇವುಗಳ ಮೂಲಕ ಸಂಕಷ್ಟದಲ್ಲಿರುವ, ನೆರವು ಬಯಸಿ ಬರುವ ಜನರಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ವಾಟ್ಸ್‌ ಆ್ಯಪ್‌- 9480803610, ಫೇಸ್ಬುಕ್‌- kalaburagi district police, ಟ್ಟಿಟರ್‌- klbdistpolice ಖಾತೆಗಳನ್ನು ತೆರೆದಿದ್ದು ಈ ಮೂಲಕ ಜನ ಪೊಲೀಸರ ಸಹಾಯ ಪಡೆಯಬಹುದು.

ಇಲ್ಲಿನ ಪೊಲೀಸ್‌ ಭವನದಲ್ಲೇ ಈ ಸೆಲ್‌ ಕೆಲಸ ಮಾಡುತ್ತಿದ್ದು ಫೇಸ್‌ಬುಕ್‌, ಟ್ವೀಟರ್‌, ವಾಟ್ಸ್‌ ಆ್ಯಪ್‌ ಮಾನಿಟರಿಂಗ್‌, ಸಿಡಿಆರ್‌ ಅನಾಲಿಸಿಸ್‌ ವಿಂಗ್‌, ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಮಾನಿಟರಿಂಗ್‌, ವೆಬ್‌ಸೈಟ್‌ ವಾಚಿಂಗ್‌ ಯುನಿಟ್‌ ಮತ್ತು ಸೈಬರ್‌ ಅಫೆನ್ಸಸ್‌ ಡಾಕ್ಯುಮೆಂಟೇಶನ್‌ ಯುನಿಟ್‌ ಅವನ್ನು ಈ ಸೆಲ್‌ ಹೊಂದಿದೆ.

ಈ ವಿಭಾಗಕ್ಕೆ ಹೈಸ್ಪೀಡ್‌ ಅಂತರ್ಜಾಲ ಸೌಲಭ್ಯವಿರುವ ಪ್ರತ್ಯೇಕ 2 ಗಣಕ ಯಂತ್ರಗಳನ್ನು ನೀಡಲಾಗಿದ್ದು, ಒಬ್ಬ ಡಿವೈಎಸ್ಪಿ, ನೋಡಲ್‌ ಅಧಿಕಾರಿ, ಪಿಐ, ಸಹಾಯಕ ನೋಡಲ್‌ ಅಧಿಕಾರಿ, ಪಿಎಸ್‌ಐ ಹಾಗೂ ಒಬ್ಬ ಎಎಸ್‌ಐ, 5 ಮಂದಿ ಕಾನ್‌ಸ್ಟೇಬಲ್‌ಗಳು ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ.

ವರದಿ: ಶೇಷಮೂರ್ತಿ ಅವಧಾನಿ, ಕನ್ನಡ ಪ್ರಭ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಕ್ಕೆ ದೇವಳ ಆಮಂತ್ರಣ ಪತ್ರಿಕೆ ವಿವಾದ; ಪ್ರೊಟೊಕಾಲ್ ಹೆಸರಲ್ಲಿ ಅನ್ಯಧರ್ಮೀಯರ ಆಹ್ವಾನಕ್ಕೆ ತೀವ್ರ ವಿರೋಧ!
ಚಿನ್ನ-ಬೆಳ್ಳಿ ಖರೀದಿ ಇನ್ನೂ ಕನಸಿನ ಮಾತು; ಆದ್ರೂ ಒಂದ್ಸಾರಿ ಗುಂಡಿಗೆ ಗಟ್ಟಿ ಮಾಡ್ಕೊಂಡು ಬೆಲೆ ನೋಡಿ