ಪಂಜಾಬ್ ಬ್ಯಾಂಕ್ ಹಗರಣ: ಸಿಬಿಐನಿಂದ ಮಾಜಿ ಉಪ ವ್ಯವಸ್ಥಾಪಕ ಶೆಟ್ಟಿ ಬಂಧನ

By Suvarna Web deskFirst Published Feb 17, 2018, 3:29 PM IST
Highlights

ಬ್ಯಾಂಕ್'ನ ಅಧಿಕಾರಿಗಳಾದ ಮನೋಜ್ ಕಾರಂತ್ ಹಾಗೂ ಹೇಮಂತ್ ಭಟ್ ಅವರನ್ನು ಬಂಧಿಸಿದ್ದು, ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ನವದೆಹಲಿ(ಫೆ.17): ಪಂಜಾಬ್ ನ್ಯಾಷನಲ್ ಬ್ಯಾಂಕ್'ನ ಸಾವಿರಾರು ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ ಮಾಜಿ ಉಪ ವ್ಯವಸ್ಥಾಪಕರಾದ ಗೋಕುಲ್'ನಾಥ್ ಶೆಟ್ಟಿ ಅವರನ್ನು ಒಳಗೊಂಡಂತೆ ಮೂವರನ್ನು ಬಂಧಿಸಿದೆ.

ಬ್ಯಾಂಕ್'ನ ಅಧಿಕಾರಿಗಳಾದ ಮನೋಜ್ ಕಾರಂತ್ ಹಾಗೂ ಹೇಮಂತ್ ಭಟ್ ಅವರನ್ನು ಬಂಧಿಸಿದ್ದು, ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಉಪ ವ್ಯವಸ್ಥಾಪಕರಾದ ಗೋಕುಲ್'ನಾಥ್ ಶೆಟ್ಟಿ 11,800 ಕೋಟಿ ರೂ.ಗಳ ಹಗರಣದ ಸಹ ಆರೋಪಿಯಾಗಿದ್ದಾರೆ, ಪ್ರಮುಖ ಆರೋಪಿ ನಿರವ್ ಮೋದಿ ಈಗಾಗಲೇ ದೇಶ ಬಿಟ್ಟು ತಲೆತಪ್ಪಿಸಿಕೊಂಡಿದ್ದಾರೆ.

click me!