ಮೋದಿಯಿಂದ ಫೋಟೋ ಸೆಷನ್ ಲೇಟ್: ಪ್ರಧಾನಿ ಸೋಫಾದಿಂದ ಎದ್ದಿದ್ದೇಕೆ?

By Web DeskFirst Published Sep 6, 2019, 1:13 PM IST
Highlights

5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆ| ಫೋಟೋ ಸೆಷನ್ ತಡವಾಗಲು ಕಾರಣರಾದರು ಮೋದಿ| ರಷ್ಯಾದ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ಸೋಫಾ ನಿರಾಕರಿಸಿದ ಪ್ರಧಾನಿ ಮೋದಿ| ಫೋಟೋ ಸೆಷನ್‌ಗಾಗಿ ಇಡಲಾಗಿದ್ದ ಸೋಫಾ ನಿರಾಕರಿಸಿ ಸರಳತೆ ಮೆರೆದ ಮೋದಿ| ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಮೋದಿ ಸರಳತೆ ವಿಡಿಯೋ|  

ವ್ಲಾಡಿವೋಸ್ಟಾಕ್(ಸೆ.06): 5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾಗೆ ತೆರಳಿದ್ದ ಪ್ರಧಾನಿ ಮೋದಿ, ಕೊನೆಯಲ್ಲಿ ಫೋಟೋ ಸೆಷನ್’ನಲ್ಲಿ ಸರಳತೆ ಮೆರೆದು ಗಮನ ಸೆಳೆದಿದ್ದಾರೆ.

ರಷ್ಯಾದ ವ್ಲಾಡಿವೋಸ್ಟಾಕ್'ನಲ್ಲಿ  ನಡೆದ ಶೃಂಗಸಭೆ ಬಳಿಕ ಫೋಟೋ ಸೆಷನ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೋದಿ ಅವರಿಗೆ ಕೂರಲು ದುಬಾರಿ ಸೋಫಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಸೋಫಾ ನಿರಾಕರಿಸಿದ ಪ್ರಧಾನಿ ಮೋದಿ, ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ.

: PM Modi refuses sofa, opts for chair at photo session in Vladivostok, Russia. https://t.co/4OhWqDFxzc pic.twitter.com/8vNVJRkc9d

— ANI Digital (@ani_digital)

ಇದನ್ನು ಕಂಡ ಇತರೆ ಅಧಿಕಾರಿಗಳು ತಾವೂ ಕೂಡ ಸೋಫಾದಿಂದ ಎದ್ದು ಸಾಮಾನ್ಯ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ವಿಶ್ವ ವೇದಿಕೆಯಲ್ಲಿ ಮೋದಿ ತೋರಿದ ಈ ಸರಳತೆಯನ್ನು ಎಲ್ಲರೂ ಕೊಂಡಾಡಿದ್ದಾರೆ. 

ಇನ್ನು ಪ್ರಧಾನಿ ಮೋದಿ ಸೋಫಾ ನಿರಾಕರಿಸಿರುವ ವಿಡಿಯೋವನ್ನು ರೈಲ್ವೇ ಸಚಿವ ಪಿಯೂಷ್ ಗೋಯಲ್ ಟ್ವಿಟರ್’ನಲ್ಲಿ ಹಂಚಿಕೊಂಡಿದ್ದಾರೆ. ಮೋದಿಯವರ ಸರಳತೆಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

click me!