ನಗದು ರಹಿತ ಆರ್ಥಿಕತೆ ಜಾರಿಗೆ ನಂದನ್ ನಿಲೇಕಣಿ ಸಹಾಯ ಯಾಚಿಸಿದ ಮೋದಿ

By Suvarna Web DeskFirst Published Dec 8, 2016, 8:24 AM IST
Highlights

ಕೇಂದ್ರ ಸರ್ಕಾರ ದೇಶಾದ್ಯಂತ ಸೃಷ್ಟಿ ಮಾಡಲು ಹೊರಟಿರುವ ನಗದು ರಹಿತ ಆರ್ಥಿಕತೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿರುವಾಗ ನರೇಂದ್ರ ಮೋದಿ ಇದಕ್ಕೆ ನಂದನ್ ನೀಲೇಕಣಿಯವರ ಸಹಾಯ ಯಾಚಿಸಿದ್ದಾರೆ.

ನವದೆಹಲಿ (ಡಿ.08): ಕೇಂದ್ರ ಸರ್ಕಾರ ದೇಶಾದ್ಯಂತ ಸೃಷ್ಟಿ ಮಾಡಲು ಹೊರಟಿರುವ ನಗದು ರಹಿತ ಆರ್ಥಿಕತೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿರುವಾಗ ನರೇಂದ್ರ ಮೋದಿ ಇದಕ್ಕೆ ನಂದನ್ ನೀಲೇಕಣಿಯವರ ಸಹಾಯ ಯಾಚಿಸಿದ್ದಾರೆ.

ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸಲು, ಅದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ರಚಿಸಿರುವ ಸಮಿತಿಗೆ ವಿರೋಧ ಪಕ್ಷದ ಸದಸ್ಯ ನಂದನ್ ನೀಲೇಕಣಿ ಸೇರ್ಪಡೆಯಾಗಿದ್ದಾರೆ.

ನೀಲೆಕಣಿಯವರನ್ನು ಒಳಗೊಂಡ 13 ಜನರ ಸಮಿತಿಯಲ್ಲಿ ಡಿಜಿಟಲ್ ಪಾವತಿಯನ್ನು ಹೇಗೆ ಇನ್ನಷ್ಟು ಉತ್ತಮಪಡಿಸುವುದು, ಹೇಗೆ ಪರಿಣಾಮಕಾರಿ ಜಾರಿಗೊಳಿಸುವುದು ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.

ವಿಪರ್ಯಾಸವೆಂದರೆ 350 ಮಿಲಿಯನ್ ಜನರ ಬಳಿ ಫೋನ್ ಇಲ್ಲ. ಹಾಗಿದ್ದಾಗ ಹೇಗೆ ಇದನ್ನು ಕಾರ್ಯರೂಪಕ್ಕಿಳಿಸುತ್ತಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.   

click me!