ರುಪೇ ಕಾರ್ಡ್‌ನಿಂದ ಮಧುಬನಿ ಪೇಟಿಂಗ್‌ ಖರೀದಿಸಿದ ಮೋದಿ

First Published Jun 3, 2018, 8:48 AM IST
Highlights

ಇಲ್ಲಿನ ಇಂಡಿಯನ್‌ ಹೆರಿಟೇಜ್‌ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರುಪೇ ಕಾರ್ಡ್‌ ಬಳಸಿ ‘ಮಧುಬನಿ’ ಪೇಂಟಿಂಗ್‌ ಅನ್ನು ಖರೀದಿಸಿದರು.

ಸಿಂಗಾಪುರ (ಜೂ. 03): ಇಲ್ಲಿನ ಇಂಡಿಯನ್‌ ಹೆರಿಟೇಜ್‌ ಸೆಂಟರ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರುಪೇ ಕಾರ್ಡ್‌ ಬಳಸಿ ‘ಮಧುಬನಿ’ ಪೇಂಟಿಂಗ್‌ ಅನ್ನು ಖರೀದಿಸಿದರು.

ಈ ಕುರಿತು ಟ್ವೀಟ್‌ ಮಾಡಿರುವ ಮೋದಿ, ‘ಸಿಂಗಾಪುರ ಮತ್ತು ಭಾರತವನ್ನು ಹತ್ತಿರಕ್ಕೆ ತರುತ್ತಿರುವ ಇಂಡಿಯನ್‌ ಹೆರಿಟೇಜ್‌ ಕೇಂದ್ರದ ಕಾರ್ಯ ಪ್ರಶಂಸೆಗೆ ಅರ್ಹವಾದದ್ದು. ಇಲ್ಲಿ ನನ್ನ ರುಪೇ ಕಾರ್ಡ್‌ನಿಂದ ಹಣ ಪಾವತಿಸಿ, ಅದ್ಭುತವಾದ ಮಧುಬಾನಿ ಪೇಂಟಿಂಗ್‌ ಖರೀದಿಸಿದ್ದೇನೆ,’ ಎಂದಿದ್ದಾರೆ. 

 

Commendable efforts by the Indian Heritage Centre to bring Singapore and India even closer. Using a RuPay card, I bought a splendid Madhubani painting. pic.twitter.com/TpzJdLUlxz

— Narendra Modi (@narendramodi)

 

click me!