ವಿಶ್ವದ ಅತಿದೊಡ್ಡ ಮೊಬೈಲ್ ಘಟಕ ಭಾರತದಲ್ಲಿ..ಎಲ್ಲಿ?

First Published Jul 10, 2018, 11:14 AM IST
Highlights

ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕ ಎಲ್ಲಿದೆ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಇನ್ನು ಮುಂದೆ ಭಾರತ ಎಂದು ನೇರವಾಗಿ ಉತ್ತರ ಬರೆಯಬಹುದು.

ನೋಯ್ಡಾ: ವಿಶ್ವದ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದನಾ ಘಟಕ ದೆಹಲಿ ಸಮೀಪದ ನೋಯ್ಡಾದಲ್ಲಿ ಸೋಮವಾರ ಕಾರ್ಯಾರಂಭ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ ಅವರು ದೆಹಲಿಯಿಂದ ನೋಯ್ಡಾವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ, ಈ ಘಟಕವನ್ನು ಲೋಕಾರ್ಪಣೆ ಮಾಡಿದರು. ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿಗೆ ಸೇರಿದ ಉತ್ಪಾದನಾ ಘಟಕ ಇದಾಗಿದ್ದು, ವಾರ್ಷಿಕ 12 ಕೋಟಿ ಸ್ಮಾರ್ಟ್‌ಫೋನ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಘಟಕ ಹೊಂದಿದೆ.

ಈ ವೇಳೆ ಮಾತನಾಡಿದ ಮೋದಿ ಅವರು, ಭಾರತದಲ್ಲಿ 40 ಕೋಟಿ ಸ್ಮಾಟ್ ಫೋರ್ನ್‌ಗಳು ಇವೆ. 32 ಕೋಟಿ ಜನ ಬ್ರಾಡ್‌ಬ್ಯಾಂಡ್ ಬಳಸುತ್ತಾರೆ. ಅಗ್ಗದ ಫೋನ್‌ಗಳು, ವೇಗದ ಇಂಟರ್ನೆಟ್, ಕಡಿಮೆ ಬೆಲೆಯ ಡೇಟಾದಿಂದಾಗಿ ಸೇವೆಗಳ ವಿತರಣೆಯಲ್ಲಿ ಪಾರದರ್ಶಕತೆ ಬರುತ್ತಿದೆ. ಮೊಬೈಲ್ ಉತ್ಪಾದನೆಯಲ್ಲಿ ಭಾರತ ವಿಶ್ವ 2ನೇ ಸ್ಥಾನಕ್ಕೇರಿದೆ ಎಂದರು.

click me!