ಮ್ಯಾನ್ ವರ್ಸಸ್ ವೈಲ್ಡ್: ಮೋದಿ ಸಂಚಿಕೆಗೆ ಜಗತ್ತು ಕ್ಲೀನ್ ಬೋಲ್ಡ್!

By Web Desk  |  First Published Aug 20, 2019, 3:49 PM IST

ಪ್ರಧಾನಿ ಮೋದಿ ಅವರ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ| ವಿಶ್ವದಲ್ಲೇ ನಂ1 ಟ್ರೆಂಡಿಂಗ್ ಕಾರ್ಯಕ್ರಮ ಎಂಬ ಹೆಗ್ಗಳಿಗೆ ಪಾತ್ರ| ಡಿಸ್ಕವರಿ ಚಾನೆಲ್’ನಲ್ಲಿ ಬಿಯರ್ ಗ್ರಿಲ್ಸ್ ನಡೆಸಿಕೊಡುವ ಮ್ಯಾನ್ ವರ್ಸಸ್ ಕಾರ್ಯಕ್ರಮ| 3.6 ಬಿಲಿಯನ್ ಜನರಿಂದ ಮೋದಿ ಕಾರ್ಯಕ್ರಮ ವೀಕ್ಷಣೆ| , ಸೂಪರ್ ಬೌಲ್ 53 ಕಾರ್ಯಕ್ರಮವನ್ನು ಹಿಂದಿಕ್ಕಿದ ಹೆಗ್ಗಳಿಕೆಗೆ ಪಾತ್ರವಾದ ಕಾರ್ಯಕ್ರಮ|


ನವದೆಹಲಿ(ಆ.20): ಬಿಯರ್ ಗ್ರಿಲ್ಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮ್ಯಾನ್ ವರ್ಸ್ಸ್ ವೈಲ್ಡ್ ಸಂಚಿಕೆ, ಇಡೀ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆ ಮಾಡಿದ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆದಿದೆ.

ಬಿಯರ್ ಗ್ರಿಲ್ಸ್ ನಡೆಸಿಕೊಡುವ ಡಿಸ್ಕವರಿ ಚಾನೆಲ್’ನಲ್ಲಿ ಪ್ರಸಾರವಾಗುವ ಮ್ಯಾನ್ ವರ್ಸ್ ವೈಲ್ಡ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದರು.

‘Officially the world’s most trending televised event! With 3.6 BILLION impressions!’ 💥💥 (Beating ‘Super Bowl 53 which had 3.4 billion social impressions.) THANK YOU everyone who tuned in! 🙏🏻 https://t.co/OvfRD9EIcq pic.twitter.com/1E0HwiI6ME

— Bear Grylls (@BearGrylls)

Tap to resize

Latest Videos

ಈ ಕಾರ್ಯಕ್ರಮ ಆ.12ರಂದು ಇಡೀ ವಿಶ್ವದಾದ್ಯಂತ ಪ್ರಸಾರವಾಗಿತ್ತು. ಈ ಕಾರ್ಯಕ್ರಮವನ್ನು ಇದುವೆರೆಗೂ 3.6 ಬಿಲಿಯನ್ ಜನ ವೀಕ್ಷಣೆ ಮಾಡಿದ್ದು,  ವಿಶ್ವದಲ್ಲಿ ನಂ1 ಸ್ಥಾನದಲ್ಲಿ ಟ್ರೆಂಡಿಂಗ್ ಆಗುತ್ತಿರುವ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕುರಿತು ಖುದ್ದು ಬಿಯರ್ ಗ್ರಿಲ್ಸ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ಸೂಪರ್ ಬೌಲ್ 53 ಕಾರ್ಯಕ್ರಮವನ್ನು ಹಿಂದಿಕ್ಕಿ ಮೋದಿ ಅವರ ಸಂಚಿಕೆ ಮೊದಲ ಸ್ಥಾನ ಪಡೆದಿದೆ. ಸೂಪರ್ ಬೌಲ್ 53 ಕಾರ್ಯಕ್ರಮ 3.4 ಬಿಲಿಯನ್ ವೀಕ್ಷಣೆ ಪಡೆದಿತ್ತು.

click me!