
ನವದೆಹಲಿ(ಸೆ.25): ಜನತೆಯನ್ನ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸುವ ‘ಸೌಭಾಗ್ಯ’ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಿಂದ ದೇಶದ ರೈತರಿಗೆ ಹಾಗೂ ಬಡವರಿಗೆ 24/7 ವಿದ್ಯುತ್ ದೊರಯಲಿದೆ. ದೇಶದಲ್ಲಿ ವಿದ್ಯುತ್ ಕ್ರಾಂತಿಗೆ ಈ ಯೋಜನೆ ನಾಂದಿ ಹಾಡಲಿದೆ
ಯೋಜನೆಯ ವಿವರಗಳು
ಬಡವರಿಗಾಗಿ ಶ್ರಮಿಸುತ್ತಿದ್ದೇವೆ : ಮೋದಿ
ನಮ್ಮ ಸರ್ಕಾರ ಬಡವರ ಮನೆಗಳಿಗೆ ತೆರಳಿ ವಿದ್ಯುತ್ ನೀಡಲಿದೆ. ವಿದ್ಯುತ್ ನೀಡಲು ಯಾವುದೇ ಶುಲ್ಕ ತೆಗೆದುಕೊಳ್ಳುವುದಿಲ್ಲ, ಬಡರಿಗೆ ಸೌಭಾಗ್ಯ ನೀಡಲು ಸಂಕಲ್ಪ ಮಾಡಿದ್ದೇವೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಈ ಯೋಜನೆಯಿಂದ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಸಿಗಲಿದೆ, ಈಗಾಗಲೇ ಮುದ್ರಾ ಯೋಜನೆಯಲ್ಲಿ 9 ಕೋಟಿ ಜನರಿಗೆ 3.5 ಲಕ್ಷ ಕೋಟಿ ಸಾಲ ನೀಡಿದ್ದೇವೆ. 310 ರೂಪಾಯಿ ಇದ್ದ ಎಲ್ಇಡಿ ಬಲ್ಬ್ ಬೆಲೆಯನ್ನ 40 ರೂ.ಗೆ ಇಳಿಸಿದ್ದೇವೆ, ನಮ್ಮ ಸರ್ಕಾರ ಪರಿಸರ ಸಂರಕ್ಷಣೆಗೆ ಕಟಿಬದ್ಧವಾಗಿದೆ. ವಿದ್ಯುತ್ ಕ್ಷೇತ್ರದಲ್ಲಿ ಭಾರೀ ಸುಧಾರಣೆಯಾಗಲಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.