ಸಾವಿರ ದಿನದ ಡೆಡ್‌ಲೈನ್: ಏನಿದೆ ಮೋದಿ ಪ್ಲ್ಯಾನ್?

Published : Jun 06, 2019, 04:29 PM IST
ಸಾವಿರ ದಿನದ ಡೆಡ್‌ಲೈನ್: ಏನಿದೆ ಮೋದಿ ಪ್ಲ್ಯಾನ್?

ಸಾರಾಂಶ

‘ಸಾವಿರ ದಿನದ ಯೋಜನೆಯ ನೀಲನಕ್ಷೆ ಕೊಡಿ’| ಕ್ಯಾಬಿನೆಟ್ ಸಚಿವರ ಸಮಿತಿಗೆ ಮೋದಿ ಆದೇಶ| ಮಿಶನ್ 2022 ಕಾರ್ಯಸಾಧನೆಗೆ ಸಜ್ಜಾದ ಮೋದಿ ಸರ್ಕಾರ| ರಸ್ತೆ, ನೀರು, ಗೃಹ ನಿರ್ಮಾಣ ಕಾರ್ಯಕ್ಕೆ ವೇಗ| 2022ರಲ್ಲಿ ಒಟ್ಟು 75 ಯೋಜನೆ ಪೂರ್ಣಗೊಳಿಸಲು ಮೋದಿ ಆದೇಶ|

ನವದೆಹಲಿ(ಜೂ.06): ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಿಂದಲೇ ಕಾರ್ಯ ಪ್ರವೃತ್ತರಾಗಿರುವ ಪ್ರಧಾನಿ ಮೋದಿ, ಹಲವು ಅಭಿವೃದ್ಧಿ ಕಾರ್ಯಗಳ ಪೂರ್ಣಗೊಳಿಸುವಿಕೆಗೆ 2022ನ್ನು ಡೆಡ್‌ಲೈನ್ ಎಂದು ಪರಿಗಣಿಸಿದ್ದಾರೆ.

ಪ್ರಮುಖವಾಗಿ ಗೃಹ ನಿರ್ಮಾಣ, ರಸ್ತೆ ನಿರ್ಮಾಣ, ಕುಡಿಯುವ ನೀರು ಮುಂತಾದ ಜನಸಾಮಾನ್ಯರ ಬೇಡಿಕೆಗಳನ್ನು ಈಡೇರಿಸಲು ಪ್ರಧನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಜ್ಜಾಗಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಲವು ಬಾರಿ ಮಿಶನ್ 2022 ಕುರಿತು ಪ್ರಸ್ತಾಪಿಸಿದ್ದರು. ಅದರಂತೆ ಈಗಾಗಲೇ ಕ್ಯಾಬಿನೆಟ್ ಸಚಿವರ ಸಮಿತಿ ರಚೆನಾಯಗಿದ್ದು, ಮಿಶನ್ 2022 ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ಅಲ್ಲದೇ ಈ ಸಮಿತಿಗೆ 1 ಸಾವಿರ ದಿನದ ಯೋಜನೆಯ ನೀಲನಕ್ಷೆ ಸಿದ್ದಪಡಿಸಲು ಪ್ರಧಾನಿ ಮೋದಿ ಆದೇಶಿಸಿದ್ದು, ಒಟ್ಟು 75 ಯೋಜನೆಗಳನ್ನು 2022ರೊಳಗಾಗಿ ಪೂರ್ಣಗೊಳಿಸಲು ಸರ್ಕಾರ ಸರ್ವಸನ್ನದ್ಧವಾಗಿದೆ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ