73ನೇ ಸ್ವಾತಂತ್ರ್ಯ ದಿನೋತ್ಸವ| ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮೋದಿ ಭಾಷಣ| ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಐತಿಹಾಸಿಕ ಘೋಷಣೆ..!| ಮೂರು ಸೇನಾ ಪಡೆಗಳ ಸಮನ್ವಯತೆಗಾಗಿ ಚೀಪ್ ಆಫ್ ಡಿಫೆನ್ಸ್ ನೇಮಕ| ಮುಂದಿನ ಗುರಿ ಜನಸಂಖ್ಯಾ ನಿಯಂತ್ರಣ ಮಾಡಲೇಬೇಕು| ಜಲ ಜೀವನ್ ಮಿಷನ್ ಗುರಿ ಇಟ್ಟುಕೊಂಡು ಮುಂದುವರಿಕೆ| ಒಂದು ದೇಶ, ಒಂದು ಚುನಾವಣೆ’ ಜಾರಿಗೆ ತರುವುದು
ನವದೆಹಲಿ[ಆ.15]: 73ನೇ ಸ್ವಾತಂತ್ರ್ಯ ದಿನವಾದ ಇಂದು ಪ್ರಧಾನಿ ಮೋದಿ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಮುಂದಿನ ಗುರಿಯನ್ನು ಅನಾವರಣಗೊಳಿಸಿದ್ದಾರೆ. ಮೋದಿ ಭಾಷಣದ ಪ್ರಮುಖ ಅಂಶಗಳು ಹೀಗಿವೆ.
ಗುರಿ - 1 ಚೀಪ್ ಆಫ್ ಡಿಫೆನ್ಸ್ ನೇಮಕ
ಮೂರು ಸೇನಾ ಪಡೆಗಳ ಸಮನ್ವಯತೆಗಾಗಿ ಚೀಪ್ ಆಫ್ ಡಿಫೆನ್ಸ್ ನೇಮಕ. ‘ಚೀಫ್ ಆಫ್ ಡಿಫೆನ್ಸ್’ ನೇಮಕದಿಂದಾಗಿ ಯುದ್ಧ, ಸುರಕ್ಷತೆ ಮತ್ತಷ್ಟು ಹೆಚ್ಚಲಿದ್ದು, ಮೂರು ಸೇನಾ ಪಡೆಗಳಿಗೆ ಚೀಫ್ ಆಫ್ ಡಿಫೆನ್ಸ್ ಸಲಹೆ, ಸೂಚನೆ ನೀಡುತ್ತಾರೆ. ಹೀಗಾಗಿ ವಾಯು, ಭೂ ಮತ್ತು ನೌಕಾಸೇನೆಗೆ ಒಬ್ಬರ ನೇತೃತ್ವ.
ಗುರಿ - 2 ಜನಸಂಖ್ಯಾ ನಿಯಂತ್ರಣ ಮಾಡಲೇಬೇಕು
ಮಗು ಹುಟ್ಟಿಸುವ ಮುನ್ನ ಯೋಚಿಸಿ, ಅವಶ್ಯಕತೆ ಪೂರೈಸಲು ಸಾಧ್ಯವಾ..? ಎಂದು ಯೋಚಿಸಿ. ಜನಸಂಖ್ಯಾ ಸ್ಪೋಟ ಮೀತಿ ಮೀರಿದೆ, ಮುಂದಿನ ಪೀಳಿಗೆಗೆ ಸವಾಲು. ಜನಸಂಖ್ಯಾ ನಿಯಂತ್ರಣದಿಂದ ಕುಟುಂಬಕ್ಕೂ ನೆಮ್ಮದಿ, ದೇಶಕ್ಕೂ ನೆಮ್ಮದಿ ಸಿಗಲಿದೆ.
ಪ್ರಧಾನಿ ಮೋದಿಯ ಈ ಘೋಷಣೆ ನಮ್ಮ ದೇಶಕ್ಕೆ ಅಗತ್ಯವಿದೆಯಾ? ಇಲ್ಲವಾ? ನಿಮ್ಮ ಅಭಿಪ್ರಾಯ ಇಲ್ಲಿ ತಿಳಿಸಿ
ಗುರಿ- 3: ಒಂದು ದೇಶ, ಒಂದು ಚುನಾವಣೆ’ ನಡೆಸಲು ಸಿದ್ಧ, ದೇಶಾದ್ಯಂತ ಚರ್ಚೆಯಾಗಲಿ
ಗುರಿ- 4: ಡಿಜಿಟಲ್ ಪೇಮೆಂಟ್ನತ್ತ ದೊಡ್ಡ ಹೆಜ್ಜೆ ಇಡಲು ಸಕಾಲ, ‘ಇಂದು ಡಿಜಿಟಲ್, ನಾಳೆ ನಗದು’ ಗುರಿ
ಗುರಿ- 5: ಪ್ರತಿ ಮನೆಗೆ ನಲ್ಲಿ ಮೂಲಕ ನೀರು ತಲುಪಿಸುವ ‘ಜಲ ಜೀವನ್ ಮಿಷನ್’ ಯೋಜನೆ
ಗುರಿ- 6: 75ನೇ ಸ್ವಾತಂತ್ರ್ಯೋತ್ಸವಕ್ಕೆ ಮನೆ, ನೀರು, ಆಪ್ಟಿಕಲ್ ಫೈಬರ್ ಇಂಟರ್ನೆಟ್
ಗುರಿ - 7: ಗಾಂಧಿ ಜಯಂತಿಗೆ ‘ಪಾಸ್ಲಿಕ್ ಮುಕ್ತ ಭಾರತ’ಕ್ಕೆ ಸಂಕಲ್ಪ
ಗುರಿ- 8: 5 ವರ್ಷದೊಳಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಾಧನೆ
ಗುರಿ- 9: ಆಧುನಿಕ ಮೂಲಸೌಕರ್ಯಕ್ಕೆ 100 ಲಕ್ಷ ಕೋಟಿ ರೂ. ಮೀಸಲು