ಪಾಲಿಕೆ ಒಂದೇ ದಿನ ವಸೂಲಿ ಮಾಡಿದ್ದು 3.35 ಲಕ್ಷ ರೂ. ದಂಡ

First Published Jun 24, 2018, 9:52 PM IST
Highlights

ಮಹಾರಾಷ್ಟ್ರ ಸರಕಾರ ಪರಿಸರ ಉಳಿವಿಗೆ ದಿಟ್ಟ ನಿರ್ಧಾರ ತೆಗೆದುಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಜೂನ್ 23 ಅಂದರೆ ನಿನ್ನೆಯಿಂದ ಜಾರಿಯಾದ ಆದೇಶಕ್ಕೆ ಪರ-ವಿರೋಧ ಏನೇ ಇದ್ದರೂ ಭರಪೂರ ದಂಡ ಮಾತ್ರ ಸಂಗ್ರಹವಾಗಿದೆ.

ಮುಂಬೈ,[ಜೂ.24] ಮಹಾರಾಷ್ಟ್ರ ಸರಕಾರ ಪರಿಸರ ಉಳಿವಿಗೆ ದಿಟ್ಟ ನಿರ್ಧಾರ ತೆಗೆದುಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಜೂನ್ 23 ಅಂದರೆ ನಿನ್ನೆಯಿಂದ ಜಾರಿಯಾದ ಆದೇಶಕ್ಕೆ ಪರ-ವಿರೋಧ ಏನೇ ಇದ್ದರೂ ಭರಪೂರ ದಂಡ ಮಾತ್ರ ಸಂಗ್ರಹವಾಗಿದೆ.

ಆದೇಶ ಜಾರಿಯಾದ ಮೇಲೆ ಮೊದಲ ಸಾರಿ ಪ್ಲಾಸ್ಟಿಕ್  ಬಳಸಿದರೆ 5 ಸಾವಿರ ದಂಡ ಹಾಕಲು ಆದೇಶ ಕಟ್ಟುನಿಟ್ಟಾಗಿ ಹೇಳಿತ್ತು. ಅದರಂತೆ ಕೇವಲ ಒಂದೇ ಒಂದು ದಿನದಲ್ಲಿ  ಮುಂಬೈ ಮಹಾನಗರ ಪಾಲಿಕೆ ಬರೋಬ್ಬರಿ 3.35 ಲಕ್ಷ ರೂ. ದಂಡ ಮತ್ತು 591 ಕೆಜಿ ನಿಷೇಧಿತ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ.

ಯಾವ ಬಗೆಯ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲವೋ ಅಥವಾ ಮರು ಬಳಕೆ ಮಾಡಲು ಸಾಧ್ಯವಿಲ್ಲವೋ ಅಂಥ ಪ್ಲಾಸ್ಟಿಕ್ ಗೆ ನಿಷೇಧ ಹೇರುತ್ತಿದ್ದೇವೆ ಎಂದು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಸ್ಪಷ್ಟಪಡಿಸಿದ್ದರು. ಅಲ್ಲದೇ ಬಾಲಿವುಡ್ ನಟ-ನಟಿಯರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದು ಸಾಮಾಜಿಕ ತಾಣದಲ್ಲಿ ಮನವಿ ಮಾಡಿಕೊಂಡಿದ್ದರು.

click me!