
ಬೆಂಗಳೂರು (ಜು.28): ಗ್ರಾಮಗಳಲ್ಲಿ ವಸತಿ ಯೋಜನೆಯಡಿ ಬಡವರಿಗೆ ಸೂರು ಕಲ್ಪಿಸುವುದು ಸುಲಭ. ಆದರೆ, ನಗರಗಳಲ್ಲಿ ಇಂಥ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಜಾಗದ ಸಮಸ್ಯೆಗಳು ಎದುರಾಗುವುದು ಸಹಜ. ಇಂಥ ಸಂದರ್ಭಗಳನ್ನೂ ಎದುರಿಸಲು ವಸತಿ ಸಚಿವ ಯು.ಟಿ.ಖಾದರ್ ಅವರ ಬಳಿ ಪರಿಹಾರವಿದೆ.
ಕರ್ನಾಟಕ ಗೃಹ ಮಂಡಳಿ, ರಾಜೀವ್ ವಸತಿ ಯೋಜನೆ...ಹೀಗೆ ವಸತಿ ಇಲಾಖೆಯಲ್ಲಿ ಬರುವ ಅನೇಕ ನಿಗಮ ಮಂಡಳಿಗಳು ಹಾಗೂ ಯೋಜನೆಗಳ ವಿರುದ್ಧವೂ ಸಾಕಷ್ಟು ದೂರುಗಳಿವೆ. ಇವೆಲ್ಲವಕ್ಕೂ ಪರಿಹಾರವೇನು? ನಿಜವಾಗಲೂ ಇಲಾಖೆಯಲ್ಲಿ ಎಂಥ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ?
ಸುವರ್ಣ ನ್ಯೂಸ್.ಕಾಮ್ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಸಚಿವರು, ತಮ್ಮ ಭವಿಷ್ಯ ಯೋಜನೆಗಳನ್ನು ಜನರೊಂದಿಗೆ ಹಂಚಿಕೊಂಡಿದ್ದು ಹೀಗೆ.