ಪುಲ್ವಾಮಾ ದಾಳಿ: ಭಯಾನಕ ಸಿಸಿಟಿವಿ ದೃಶ್ಯ ವಶಕ್ಕೆ

By Web DeskFirst Published Feb 25, 2019, 12:53 PM IST
Highlights

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14ರಂದು ನಡೆದ ಭೀಕರ ಉಗ್ರರ ದಾಳಿಯ ಸಿಸಿಟಿವಿ ದೃಶ್ಯಾವಳಿಯನ್ನು NIA ವಶಕ್ಕೆ ಪಡೆದುಕೊಂಡಿದೆ. 

ನವದೆಹಲಿ :  ಫೆ.14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ನಡೆದು 44 ಭಾರತೀಯ ಯೋಧರು ಹುತಾತ್ಮರಾದ ಸಿಸಿಟಿವಿ ದೃಶ್ಯಾವಳಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ. 

ಸಿಸಿಟಿವಿಯಲ್ಲಿ ಕೆಂಪು ಬಣ್ಣದ ಇಕೋ ಕಾರೊಂದು ಕಂಡು ಬಂದಿದ್ದು, ದಾಳಿಕೋರ ಆದಿಲ್ ದಾರ್  ಚಾಲಕನ ಸೀಟಿನಲ್ಲಿ ಕುಳಿತಿರುವುದು ದೃಶ್ಯವೂ ಲಭ್ಯವಾಗಿದೆ.   

ಪುಲ್ವಾಮಾ ದಾಳಿ : ಭಾರತ ಬೆಂಬಲಿಸಿದ ಉತ್ತರ ಕೊರಿಯಾ

ಈ ಸಿಸಿಟಿವಿ ದೃಶ್ಯಾವಳಿಯ ಮೂಲಕ ಈ ಕಾರಿನ ಮಾಲಿಕ ಯಾರು ಎನ್ನುವುದನ್ನು  ಪತ್ತೆ ಮಾಡಲಾಗಿದ್ದು, ದಾಳಿ ನಡೆದ ದಿನದಿಂದ  ಮಾಲಿಕ ನಾಪತ್ತೆಯಾಗಿದ್ದಾನೆ ಎಂದು NIA ಅಧಿಕಾರಿಗಳು ಹೇಳಿದ್ದಾರೆ. 

2010- 11 ರ ಮಾಡೆಲ್ ಕಾರು ಇದಾಗಿದ್ದು, ಇದಕ್ಕೆ ಮತ್ತೊಮ್ಮೆ ಪೈಂಟ್ ಮಾಡಲಾಗಿದ್ದು, ಈ ಬಗ್ಗೆ NIA ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

ನಾವು 1 ಅಣುಬಾಂಬ್‌ ಹಾಕಿದ್ರೆ ಭಾರತ 20 ಹಾಕಿ ನಮ್ಮನ್ನು ಮುಗಿಸುತ್ತೆ!

ಇನ್ನು ದಾಳಿಯ ಬಗ್ಗೆ ಪ್ರತ್ಯಕ್ಷ ದರ್ಶಿಯೋರ್ವರು ಸೇನಾ ಪಡೆ ತೆರಳುತ್ತಿದ್ದ ಪ್ರದೇಶದಲ್ಲಿ  ಕೆಂಪು ಬಣ್ಣದ ಕಾರೊಂದು ತೆರಳಿದ್ದು, ಬಳಿಕ ಈ ಸ್ಫೋಟವಾಗಿತ್ತು ಎಂದು ಹೇಳಿದ್ದರು. 

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ.14ರಂದು ಪಾಕಿಸ್ತಾನ ಮೂಲದ ಜೈಶ್ ಇ ಸಂಘಟನೆ ದಾಳಿ ನಡೆಸಿ, 44 ಯೋಧರು ವೀರಮರಣವನ್ನಪ್ಪಿದ್ದರು.  ಆದಿಲ್ ದಾರ್ ಎಂಬ ಆತ್ಮಹತ್ಯಾ ದಾಳಿಕೋರ ಈ ಭೀಕರ ಸ್ಫೋಟಕ್ಕೆ ಕಾರಣನಾಗಿದ್ದ ಎನ್ನುವ ವಿಚಾರ ಬಯಲಾಗಿತ್ತು. 

click me!