ವಿಶ್ವ ದಾಖಲೆಗೆ ಸೇರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

Published : Feb 25, 2019, 10:51 AM IST
ವಿಶ್ವ ದಾಖಲೆಗೆ ಸೇರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ವಿಶ್ವದಾಖಲೆಗೆ ಸೇರ್ಪಡೆಗೊಳ್ಳಲಿದ್ದಾರೆ. ಇದೇ ಫೆಬ್ರವರಿ 28 ರಂದು ದೇಶದ 1 ಕೋಟಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೆ.28ರಂದು ಪಕ್ಷದ 1 ಕೋಟಿ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ. ದೇಶದ 15000 ಸ್ಥಳಗಳಲ್ಲಿನ ಕಾರ್ಯಕರ್ತರ ಜೊತೆ ಮೋದಿ ಸಂವಾದ ನಡೆಸಲಿದ್ದು, ಇದು ವಿಶ್ವದಾಖಲೆಯ ಸಂವಾದ ಎನ್ನಿಸಿಕೊಳ್ಳಲಿದೆ. 

‘ಫೆ.28ರಂದು ಪ್ರಧಾನಿ ಮೋದಿಯವರು ಹಿಂದೆಂದೂ ನಡೆಯದ ಪ್ರಮಾಣದಲ್ಲಿ ವಿಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ. 15,000 ಸ್ಥಳಗಳಿಂದ ಒಂದು ಕೋಟಿಗೂ ಹೆಚ್ಚು ಕಾರ್ಯಕರ್ತರು, ಹಿತೈಷಿಗಳು ಹಾಗೂ ಸ್ವಯಂಸೇವಕರ ಜತೆ ಏಕಕಾಲದಲ್ಲಿ ಸಂವಾದ ನಡೆಸಲಿದ್ದಾರೆ. 

ಇದು ವಿಶ್ವದ ಅತಿದೊಡ್ಡ ವಿಡಿಯೋ ಕಾನ್ಫರೆನ್ಸ್‌ ಆಗಿರಲಿದೆ’ ಎಂದು ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ. ಜನರು ನಮೋ ಆ್ಯಪ್‌ ಮೂಲಕ ತಮ್ಮ ಪ್ರಶ್ನೆಗಳನ್ನು ‘ಮೇರಾ ಬೂತ್‌ ಸಬ್ಸೇ ಮಜಬೂತ್‌’ ಎಂದು ಬರೆದು ಹ್ಯಾಷ್‌ಟಾಗ್‌ ಮಾಡುವ ಮೂಲಕ ಕೇಳಬಹುದಾಗಿದೆ ಎಂದೂ ತಿಳಿಸಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!