'ವಿಡಿಯೋ ಗೇಮ್' ಆಡಲು ಚೀನಾಗೆ ಹೋದ್ರಾ ಪಾಕ್‌ ಪ್ರಧಾನಿ?

Published : Nov 07, 2018, 05:52 PM ISTUpdated : Nov 07, 2018, 05:55 PM IST
'ವಿಡಿಯೋ ಗೇಮ್' ಆಡಲು ಚೀನಾಗೆ ಹೋದ್ರಾ ಪಾಕ್‌ ಪ್ರಧಾನಿ?

ಸಾರಾಂಶ

ತನ್ನ ದೇಶಕ್ಕೆ ಹಣಕಾಸಿನ ನೆರವು ಪಡೆಯುವ ಸಲುವಾಗಿ ಪಾಕ್ ಪ್ರಧಾನಿ ಚೀನಾಗೆ ಭೇಟಿ ನೀಡಿದ್ದರು. ಆದರೀಗ ಅವರ ಮೊದಲ ಚೀನಾ ಭೇಟಿ ಮಾತ್ರ ಬೇರೆಯೇ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆ.

ಇಸ್ಲಮಾಬಾದ್[ನ.07]: ಆರ್ಥಿಕ ಸಂಕಷ್ಟದಿಂದ ನಲುಗುತ್ತಿರುವ ತನ್ನ ದೇಶಕ್ಕೆ ಹಣಕಾಸಿನ ನೆರವು ಪಡೆಯುವ ಸಲುವಾಗಿ ಪಾಕ್ ಪ್ರಧಾನಿ ಚೀನಾಗೆ ಭೇಟಿ ನೀಡಿದ್ದರು. ಆದರೀಗ ಅವರ ಮೊದಲ ಚೀನಾ ಭೇಟಿ ಮಾತ್ರ ಬೇರೆಯೇ ಕಾರಣಗಳಿಂದ ಸದ್ದು ಮಾಡುತ್ತಿದ್ದು, ಇಮ್ರಾನ್ ಖಾನ್ ಅವರು ಅಪಹಾಸ್ಯಕ್ಕೀಡಾಗಿದ್ದಾರೆಂದರೆ ತಪ್ಪಾಗುವುದಿಲ್ಲ.

ಎಲ್ಲಕ್ಕಿಂತಲೂ ಮೊದಲು ಚೀನಾ ಭೇಟಿಯ ವೇಳೆ ಪಾಕ್ ಪ್ರಧಾನಿ ನೀಡಿದ್ದ ಭಾಷಣವನ್ನು ನೇರ ಪ್ರಸಾರ ಮಾಡಿದ್ದ ಪಾಕಿಸ್ತಾನದ ಸರ್ಕಾರಿ ಚಾನೆಲ್ ಪಿಟಿವಿಯು ಬೀಜಿಂಗ್ ಬದಲಾಗಿ ಬೆಗಿಂಗ್[ಭಿಕ್ಷೆ ಬೇಡುವುದು] ಎಂದು ಬರೆದಿತ್ತು. ಇದು ಟ್ರೋಲ್ ಆಗಿ ಎಲ್ಲವೂ ಶಾಂತವಾಯ್ತು ಎನ್ನುವಷ್ಟರಲ್ಲಿ ಇಮ್ರಾನ್ ಖಾನ್‌ರವರ ಮತ್ತೊಂದು ಫೋಟೋ ಸೋಷಲ್ ಮೀಡಿಯಾಗಳಲ್ಲಿ ವೈರಲ್ ಆಗಿ, ಮತ್ತೆ ಮುಖಭಂಗವುಂಟು ಮಾಡಿದೆ.

ಇಮ್ರಾನ್ ಖಾನ್ ಶಾಂಗಾಯ್‌ನಲ್ಲಿ ಅಯೋಜಿಸಿದ್ದ ಚೀನಾದ ಮೊದಲ ಅಂತರಾಷ್ಟ್ರೀಯ ಇಂಪೋರ್ಟ್‌ ಎಕ್ಸ್‌ಪೋನಲ್ಲಿ ಭಾಗವಹಿಸಿದ್ದರು. ಸರ್ಕಾರವು ಎಕ್ಸ್‌ಪೋನಲ್ಲಿ ಭಾಗವಹಿಸಿದ್ದ ಇಮ್ರಾನ್‌ ಖಾನ್‌ರವರ ಫೋಟೋಗಳನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿತ್ತು. ಇದರಲ್ಲಿ ಇಮ್ರಾನ್‌ ಖಾನ್‌ 'ವಿಡಿಯೋ ಗೇಮ್‌ ಪಾರ್ಲರ್‌'ನಲ್ಲಿ ’ಸ್ಪೇಸ್‌ಶಿಪ್‌’ನಂತೆ ಕಾಣುವ ಮಷೀನ್‌ ಒಂದರಲ್ಲಿ ಕುಳಿತಿರುವಂತೆ ಕಂಡು ಬರುತ್ತದೆ. ಇಮ್ರಾನ್‌ ಖಾನ್‌ರೊಂದಿಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೊಹಮ್ಮದ್‌ ಖುರೇಶಿ ಸೇರಿದಂತೆ ಇನ್ನಿತರ ಹಿರಿಯರೂ ನಿಂತಿರುವುದು ಕಂಡು ಬರುತ್ತದೆ.

ಕ್ರಿಕೆಟರ್‌ನಿಂದ ನಾಯಕನಾದ ಇಮ್ರಾನ್‌ ಖಾನ್‌ರವರ ಈ ಫೋಟೋವನ್ನು ಹಲವಾರು ಮಂದಿ ಪಾಕಿಸ್ತಾನಿಗರು ಟ್ರೋಲ್ ಮಾಡಿದ್ದಾರೆ. ಇವರಲ್ಲಿ ಕೆಲವರು ಹಾಸ್ಯಾಸ್ಪದವಾಗಿ ಕಮೆಂಟ್ ಮಾಡಿದ್ದಾರೆ. ಕಾಶಿಫ್‌ ಹೆಸರಿನ ವ್ಯಕ್ತಿಯೊಬ್ಬರು 'ನಿಮ್ಮ ಮನೆಗೆ ಹೊಸ ಕಂಪ್ಯೂಟರ್ ಬಂದಾಗ' ಎಂಬ ತಲೆಬರಹ ನೀಡಿ ಇಮ್ರಾನ್ ಖಾನ್‌ರವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಮತ್ತೊಬ್ಬ ಯುವಕ ’ಇಮ್ರಾನ್ ಖಾನ್ ವಿಡಿಯೋ ಗೇಮ್‌ ಆಡುತ್ತಿದ್ದು, ಇತರರು ತಮ್ಮ ಸರದಿಗೆ ಕಾಯುತ್ತಿರುವಂತೆ ಕಾಣುತ್ತಿದೆ’ ಎಂದು ಬರೆದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ