
ಚಿಕ್ಕಮಗಳೂರು(ಅ.27): ಅಬ್ಬಾಸ್, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ನಿವಾಸಿ. ಐದು ವರ್ಷದವನಿದ್ದಾಗ ಅಚಾನಕ್ಕಾಗಿ ಮನೆಯಿಂದ ಹೊರ ಬಂದ ಅಬ್ಬಾಸ್. ಈಗ ಹೆತ್ತವರಿಗಾಗಿ ಊರೂರು ಅಲೆಯುತ್ತಿದ್ದಾರೆ. ಕಂಡ ಕಂಡಲ್ಲಿ ಕರಪತ್ರ ಅಂಟಿಸಿ ಪೋಷಕರ ಹುಡುಕಾಟಕ್ಕೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಅಬ್ಬಾಸ್ ಐದು ವರ್ಷದವನಿದ್ದಾಗ ಕುರಿ ಜೊತೆ ಆಟವಾಡುತ್ತಿದ್ದಾಗ ಅದಕ್ಕೆ ಹೊಡೆದಿದ್ದಾರಂತೆ. ಕುರಿ ಸತ್ತೇ ಹೋಗಿದೆ. ಅಪ್ಪ-ಅಮ್ಮ ಬೈಯ್ಯೋದು ಗ್ಯಾರಂಟಿ ಎಂದುಕೊಂಡ ಅಬ್ಬಾಸ್ ಭಯದಲ್ಲಿ ಮನೆ ಬಿಟ್ಟು ಅಜ್ಜಿಮನೆಗೆಂದು ಬಸ್ ಹತ್ತಿದ್ದಾರಂತೆ ಆದ್ರೆ ಬಸ್ ಹೋಗಿದ್ದೇ ಬೇರೆ ಕಡೆ.
ದಿಕ್ಕು ತೋಚದೆ ಬಸ್ ನಿಲ್ದಾಣದಲ್ಲಿ ಅಳುತ್ತಾ ಕೂತಿದ್ದ ಇವರನ್ನು ಬಸ್ ಡ್ರೈವರ್ ಸಿಖಂದರ್ ಎಂಬವರು ಮನೆಗೆ ಕರೆದೊಯ್ದು ಸಾಕಿ, ದೊಡ್ಡವರನ್ನಾಗಿಸಿ ಮದುವೆಯನ್ನೂ ಮಾಡಿದ್ದಾರೆ. ನಾಲ್ಕು ಮಕ್ಕಳು ಕೂಡ ಇದ್ದಾರೆ. ಸುಖವಾಗಿ ಜೀವನ ಸಾಗಿಸುತ್ತಿದ್ದರೂ ಅಬ್ಬಾಸ್ಗೆ ಹೆತ್ತವರ ನೆನಪು ಬಿಟ್ಟಿಲ್ಲ. ಹೆತ್ತವರಿಗಾಗಿ ಹುಡುಕಾಡುತ್ತಲೇ ಇದ್ದಾರೆ.
ಇನ್ನೂ ಅಬ್ಬಾಸ್ ಊರು ಬಿಟ್ಟಾಗ ಚಿಕ್ಕವನಿದ್ದ ಕಾರಣ ಊರ ಬಗ್ಗೆ ಏನೇನೂ ಗೊತ್ತಿಲ್ಲ. ಬಯಲುಸೀಮೆ ಭಾಗದ ನೆನೆಪು, ತನಗೊಬ್ಬಳು ಸೋದರಿ ಇದ್ದಳು ಅನ್ನೋ ನೆನಪಿದೆ. ಅದೇನೆ ಇರಲಿ 36 ವರ್ಷಗಳಿಂದ ಹಗಲಿರುಳು ಹೆತ್ತೋರ ಹುಡುಕಾಟದಲ್ಲಿರುವ ಅಬ್ಬಾಸ್ ಕುಟುಂಬ ಪ್ರೇಮ ನಿಜಕ್ಕೂ ಬೇಶ್ ಎನ್ನಿಸುವಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.