
ವರುಣ್ ಶೂರ್: 13ನೇ ವಯಸ್ಸಿನಲ್ಲಿ ವೆಬ್ ವಿನ್ಯಾಸದಲ್ಲಿ ಆಸಕ್ತಿ ಬೆಳಸಿಕೊಂಡ ವರುಣ್ ಶೂರ್, 17ನೇ ವಯಸ್ಸಿನಲ್ಲಿ ಕಾಲೇಜು ಬಿಟ್ಟು, 2001ರಲ್ಲಿ ತನ್ನದೇ ಕಯಾಕೋ ಎಂಬ ಕಂಪನಿಯನ್ನು ಆರಂಭಿಸಿದವರು. ವೆಬ್ ವಿನ್ಯಾಸ ಸಂಬಂಧಿ ಕ್ಷೇತ್ರದಲ್ಲಿ ಕಯಾಕೋ ಇನ್ಫೋಟೆಕ್ ಪ್ರಮುಖ ಕಂಪನಿ.
ಕೈಲಾಶ್ ಕಾಟ್ಕರ್: ಮಹಾರಾಷ್ಟ್ರದ ಸಣ್ಣ ಹಳ್ಳಯೊಂದರಲ್ಲಿ ರೇಡಿಯೋ ಹಾಗೂ ಕಾಲ್ಕ್ಯೂಲೇಟರ್ ರಿಪೇರಿ ಮಾಡುತ್ತಿದ್ದ ಕೈಲಾಶ್ ಕಾಟ್ಕರ್ ಈಗ 200 ಕೋಟಿ ವ್ಯವಹಾರ ನಡೆಸುವ ಕ್ವಿಕ್ ಹೀಲ್ ಟೆಕ್ನಾಲಿಜಿಸ್ ಕಂಪನಿಯ ಮಾಲಕ. ಯಾವುದೇ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯದೇ ಕಾಟ್ಕರ್ ತನ್ನ ಸಹೋದರನೊಂದಿಗೆ ಸೇರಿ ಅಭಿವೃದ್ಧಿ ಪಡಿಸಿದ ಕ್ವಿಕ್ ಹೀಲ್ ಆ್ಯಂಟಿ-ವೈರಸ್ ಇಂದು ಕಂಪ್ಯೂಟರ್ ಬಳಕೆದಾರರಲ್ಲಿ ಮನೆಮಾತಾಗಿದೆ.
ದೀಪಕ್ ರವೀಂದ್ರನ್: ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಕ್ವೆಸ್ಟ್ ಟೆಕ್ನಾಲಾಜಿಸ್ ಎಂಬ ಕಂಪನಿಯನ್ನು ಆರಂಭಿಸಿ ಸಣ್ಣ ವರ್ತಕರ ನೆರವಿಗೆ ಬರುವ ಸಾಫ್ಟವೇರ್;ಗಳನ್ನು ಅಭಿವೃದ್ಧಿಪಡಿಸಿದ್ದಾರೆ ದೀಪಕ್ ರವೀಂದ್ರನ್.
ರಿತೇಶ್ ಅಗರ್ವಾಲ್: ಓಯೋ ರೂಮ್ಸ್ ಆ್ಯಪ್ ಬಗ್ಗೆ ತಿಳಿಯದ ಸ್ಮಾರ್ಟ್ ಪೋನ್ ಬಳಕೆದಾರರು ಕಡಿಮೆ. ಹೋಟೆಲ್ ಬುಕಿಂಗ್ ಮಾಡುವ ಓಯೋ ಆ್ಯಪ್'ನ್ನು ಅಭಿವೃದ್ಧಿಪಡಿಸಿದ ರಿತೇಶ್ ಅಗರ್ವಾಲ್ 18ನೇ ವಯಸ್ಸಿನಲ್ಲಿ ಕಾಲೇಜನ್ನು ಬಿಟ್ಟು ತನ್ನ ಕನಸನ್ನು ಬೆನ್ನಟ್ಟಿದವರು.
ಕುನಾಲ್ ಶಾ: ಆನ್’ಲೈನ್ ರಿಚಾರ್ಜ್ ವ್ಯವಸ್ಥೆಯನ್ನು ಸರಳೀಕರಿಸುವ ಹಿಂದೆ ಕುನಾಲ್ ಶಾ ಎಂಬವರು ಸ್ಥಾಪಿಸಿದ ಫ್ರಿ-ರಿಚಾರ್ಜ್ ಕಂಪನಿಯ ಕೊಡುಗೆ ಪ್ರಮುಖ. 2010ರಲ್ಲಿ ಆರಂಭವಾದ ಈ ಕಂಪನಿಯನ್ನು ಇತ್ತೀಚೆಗೆ ಸ್ನಾಪ್ ಡೀಲ್ ಖರೀದಿಸಿದೆ. ಕಲೆ ಮತ್ತು ತತ್ವಶಾಸ್ತ್ರದಲ್ಲಿ ಪದವಿ ಪಡೆದಿರುವ ಕುನಾಲ್ ಶಾ, ಅರ್ಧದಲ್ಲೇ ಮ್ಯಾನೇಜ್'ಮೆಂಟ್ ಶಿಕ್ಷಣವನ್ನು ಮೊಟಕುಗೊಳಿಸಿದವರು.
ಅಜರ್ ಇಕ್ಬಾಲ್: ಪ್ರತಿಷ್ಠಿತ ಐಐಟಿಯಿಂದಲೇ ಶಿಕ್ಷಣವನ್ನು ಅರ್ಧದಲ್ಲೇ ಬಿಟ್ಟು ನ್ಯೂಸ್ ಇನ್ ಶಾರ್ಟ್ ಎಂಬ ಸೇವೆಯನ್ನು ಆರಂಭಿಸಿ, ಮಾಧ್ಯಮ ಹಾಗೂ ತಂತ್ರಜ್ಞಾನ ರಂಗದಲ್ಲಿ ಹೆಸರು ಮಾಡಿದ ಅಝರ್ ಇಕ್ಬಾಲ್, ಕೇವಲ 60 ಪದಗಳಲ್ಲಿ ಸುದ್ದಿ ನೀಡುವ ಆ್ಯಪನ್ನು ಅಭಿವೃದ್ಧಿಪಡಿಸಿದ್ದಾರೆ.
ರಾಹುಲ್ ಯಾದವ್: ನಗರ ಪ್ರದೇಶಲ್ಲಿದ್ದು ಹೌಸಿಂಗ್.ಕಾಮ್ ಹೆಸರನ್ನು ಕೇಳದವರಾರು ಇರಲಿಕ್ಕಿಲ್ಲ. ಐಐಟಿ ಮುಂಬೈಯಿಂದ ಅರ್ಧದಲ್ಲೇ ಶಿಕ್ಷಣವನ್ನು ಬಿಟ್ಟು ಇತರರೊಂದಿಗೆ ಸೇರಿ ಹೌಸಿಂಗ್.ಕಾಮ್'ಅನ್ನು ಆರಂಭಿಸಿದ್ದ ರಾಹುಲ್ ಯಾದವ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.