ದೇಶ ವಿಭಜನೆ ಎಚ್ಚರಿಕೆ ನೀಡಿದ ಮುಫ್ತಿ ಆಪ್ತ

Published : Jul 29, 2018, 11:42 AM ISTUpdated : Jul 30, 2018, 12:16 PM IST
ದೇಶ ವಿಭಜನೆ ಎಚ್ಚರಿಕೆ ನೀಡಿದ ಮುಫ್ತಿ ಆಪ್ತ

ಸಾರಾಂಶ

ಜಮ್ಮು ಕಾಶ್ಮೀರದ ಪಿಡಿಪಿ ಮುಖಂಡ ಮುಜಾಫರ್ ಹುಸೇನ್ ಬೇಗ್ ದೇಶದಲ್ಲಿ ನಡೆಯುತ್ತಿರುವ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ಇಂತಹ ಪ್ರಕರಣಗಳನ್ನು ತಡೆಯದಿದ್ದರೆ ದೇಶ ಮತ್ತೊಮ್ಮೆ ವಿಭಜನೆಯಾಗಲಿದೆ ಎಂದು ಹೇಳಿದ್ದಾರೆ.

ಶ್ರೀನಗರ: ಗೋವಿನ ಕಳ್ಳ ಸಾಗಾಟಗಾರ ಎಂಬ ಆರೋಪದ ಮೇರೆಗೆ ರಾಜಸ್ಥಾನದ ಅಲ್ವರ್‌ನಲ್ಲಿ  ಅಕ್ಬರ್ ಖಾನ್ ಎಂಬಾತನನ್ನು ಬಡಿದು ಹತ್ಯೆಗೈದ  ಬೆನ್ನಲ್ಲೇ, ‘ಗೋರಕ್ಷಣೆ ಹೆಸರಿನಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ಹತ್ಯೆ ಘಟನೆಗಳನ್ನು ತಡೆಯಬೇಕು. 

ಇಲ್ಲದಿದ್ದರೆ, ದೇಶ ಮತ್ತೊಮ್ಮೆ ವಿಭಜನೆಯಾಗಲಿದೆ’ ಎಂದು ಕೇಂದ್ರ ಸರ್ಕಾರಕ್ಕೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರ ಆಪ್ತ ಪಿಡಿಪಿ ಹಿರಿಯ ಮುಖಂಡ ಮುಜಾಫರ್ ಹುಸೇನ್ ಬೇಗ್ ವಿವಾದಿತ ಹೇಳಿಕೆ ನೀಡಿದ್ದಾರೆ. ‘ಇಂಥ ಘಟನೆ ತಡೆಯದಿದ್ದರೆ ಅದರ ಪರಿಣಾಮ ಸರಿಯಿರುವುದಿಲ್ಲ. ಈಗಾಗಲೇ 1947 ರಲ್ಲಿ ದೇಶ ಇಬ್ಭಾಗವಾಗಿದೆ,’ ಎಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆಲಿವರಿ ಬಾಯ್ಸ್‌ಗೆ ಲಿಫ್ಟ್ ಬಳಸಬೇಡಿ ಎಂದ ಮೇಘನಾ ಫುಡ್ಸ್; ಪೋಸ್ಟರ್ ವೈರಲ್‌ ಆಗ್ತಿದ್ದಂತೆ ಕ್ಷಮೆಯಾಚನೆ
ಎಸ್‌ಟಿಡಿ ಟೆಸ್ಟ್ ಮಾಡುವಂತೆ ಪದೇ ಪದೇ ಪೀಡಿಸುತ್ತಿದ್ದ ಗರ್ಲ್‌ಫ್ರೆಂಡ್‌ ಕತೆ ಮುಗಿಸಿದ ವಿದ್ಯಾರ್ಥಿ