ಪೇದೆ ಸುಭಾಷ್ ಆತ್ಮಹತ್ಯೆಗೆ ಟ್ವಿಸ್ಟ್!

Published : May 24, 2017, 06:31 PM ISTUpdated : Apr 11, 2018, 01:13 PM IST
ಪೇದೆ ಸುಭಾಷ್ ಆತ್ಮಹತ್ಯೆಗೆ ಟ್ವಿಸ್ಟ್!

ಸಾರಾಂಶ

ಪೇದೆ ಸುಭಾಷ್ ಕುಮಾರ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಶುರುವಾಗಿದೆ. ನಿನ್ನೆ ನಡೆದ ಈ  ಘಟನೆಯ ಬಗ್ಗೆ ಹಲವಾರು ಅನುಮಾನಗಳು ಶುರುವಾಗಿದ್ವು.  ಈಗ ಆ ಪ್ರಕರಣಕ್ಕೆ ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ ಸುಭಾಷ್​ನೇ ಕೊಲೆಗಾರ ಎಂಬ  ಹೊಸದೊಂದು ಟ್ವಿಸ್ಟ್  ಸಿಕ್ಕಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಹೆಡ್​ ಕಾನ್ಸ್ಟೇಬಲ್​ ಸುಭಾಷ್​ ವಿರುದ್ಧ ಕೊಲೆ ,ಆತ್ಮಹತ್ಯೆಗೆ ಯತ್ನ ಮತ್ತು ಆತ್ಮ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು (ಮೇ.24): ಪೇದೆ ಸುಭಾಷ್ ಕುಮಾರ್ ಆತ್ಮಹತ್ಯೆ ಪ್ರಕರಣದ ಸುತ್ತ ಅನುಮಾನದ ಹುತ್ತ ಶುರುವಾಗಿದೆ. ನಿನ್ನೆ ನಡೆದ ಈ  ಘಟನೆಯ ಬಗ್ಗೆ ಹಲವಾರು ಅನುಮಾನಗಳು ಶುರುವಾಗಿದ್ವು.  ಈಗ ಆ ಪ್ರಕರಣಕ್ಕೆ ಪೊಲೀಸ್​ ಹೆಡ್​ ಕಾನ್ಸ್​ಟೇಬಲ್​ ಸುಭಾಷ್​ನೇ ಕೊಲೆಗಾರ ಎಂಬ  ಹೊಸದೊಂದು ಟ್ವಿಸ್ಟ್  ಸಿಕ್ಕಿದೆ. ಈ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು, ಹೆಡ್​ ಕಾನ್ಸ್ಟೇಬಲ್​ ಸುಭಾಷ್​ ವಿರುದ್ಧ ಕೊಲೆ ,ಆತ್ಮಹತ್ಯೆಗೆ ಯತ್ನ ಮತ್ತು ಆತ್ಮ ಹತ್ಯೆ ಪ್ರಕರಣ ದಾಖಲಿಸಿದ್ದಾರೆ.

ಬ್ಯಾಪ್ಟಿಸ್ಟ್ ​ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿರುವ ಸುಭಾಷ್​ನನ್ನ ಸಂಜೆ ವೇಳೆ ನಾರ್ಮಲ್​ ವಾರ್ಡ್​ಗೆ ಶಿಫ್ಟ್​ ಮಾಡುವ ಸಾಧ್ಯತೆ ಇದೆ. ನಂತರ ಆತನ ವಿಚಾರಣೆ ಮುಂದುವರೆಯಲಿದೆ . ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ  ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು, ಸುಭಾಷ್​ ಸಿಎಂ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಬೆಟ್ಟಿಂಗ್​ನಲ್ಲಿ ಮುಳುಗಿರುತ್ತಿದ್ದ ಎಂದು ಆರೋಪಿಸಿದ್ದಾರೆ.

 

ಕ್ರಿಕೆಟ್​ ಬೆಟ್ಟಿಂಗ್​ ಚಟದಿಂದ ವಿಪರೀತ ಸಾಲ ಮಾಡಿಕೊಂಡಿದ್ದಕ್ಕೆ ಸಾಲಗಾರರು ಪದೇ ಪದೇ ಕೇಳುತ್ತಿದ್ದರು. ಹೀಗಾಗಿ ಈತ ತನ್ನ ಕುಟುಂಬದೊಂದಿಗೆ ಸಾವಿಗೆ ಶರಣಾಗಲು ಮುಂದಾಗಿದ್ದ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ ಈ ಕೃತ್ಯ ಪೂರ್ವ ನಿಯೋಜಿತನಾ ಅನ್ನೋ ಅನುಮಾನ ಶುರುವಾಗಿದೆ. ಯಾಕೆಂದರೆ ಸುಭಾಷ್​ ತನ್ನ ಸೋದರನಿಗೆ ಆತ್ಮಹತ್ಯೆಗೂ ಮುನ್ನಾ ದಿನವೇ ಕರೆ ಮಾಡಿ ಬೆಳಗ್ಗೆ ಬರುವುದಕ್ಕೆ ಹೇಳಿದ್ದನೆಂದು ಪೊಲೀಸ್​ ಮೂಲಗಳ ಮಾಹಿತಿ ಹೇಳುತ್ತವೆ. ಇದರಿಂದ ಈತ ತನ್ನ ಕುಟುಂಬಕ್ಕೆ ವಿಷವನ್ನ ಇಂಜೆಕ್ಟ್​ ಮಾಡಿ ಅವರು ಸತ್ತ ಬಳಿಕ ಟ್ಯಾಬ್ಲೆಟ್​ ನುಂಗಿ ಆತ್ಮ ಹತ್ಯೆಗೆ ಯತ್ನಿಸುವಂತೆ ನಾಟಕವಾಡಿದ್ದಾನಾ ಅನ್ನೋ ಅನುಮಾನ ಶುರುವಾಗಿದೆ. ಇನ್ನು ಈ ಸಂಬಂಧ ಕೊಟ್ರೇಶ್​ನನ್ನೂ ತನಿಖೆಗೊಳಪಡಿಸುವ ಸಾಧ್ಯತೆ ಇದೆ.

ಸದ್ಯ ವಿಪರೀತ ಶೊಕಿಲಾಲನಾಗಿದ್ದ ಸುಭಾಷ್​ ಆತ್ಮ ಹತ್ಯೆ ಮಾಡಿಕೊಳ್ಳುವುದಾಗಿದ್ದಲ್ಲಿ ಆತನೂ ವಿಷ ಸೇವಿಸುತ್ತಿದ್ದ ಆದರೆ ಆತ ಸ್ಲೀಪಿಂಗ್​ ಟ್ಯಾಬ್ಲೆಟ್​ ನುಂಗಿದ್ಯಾಕೆ ಎಂಬ ಹಲವಾರು ಪ್ರಶ್ನೆಗಳು ಮೂಡಿದೆ.  ಈತನ ವಿರುದ್ಧ  ಸಂಪಿಗೆ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ