
ಬೆಳಗಾವಿ (ಫೆ.26): ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಇದೇ ಮಾರ್ಚ್ 1ರಂದು ನಡೆಯಲಿದ್ದು ಮೇಯರ್, ಉಪ ಮೇಯರ್ ಗದ್ದುಗೆ ಏರಲು ಎಂಇಎಸ್ ಮತ್ತು ಕನ್ನಡ ಪಾಳ್ಯದಲ್ಲಿ ರಾಜಕೀಯ ಚಟುವಟಿಕೆ ಚುರುಕಗೊಂಡಿದೆ.
ಬೆಳಗಾವಿ ಪಾಲಿಕೆಯಲ್ಲಿ 58 ಸದಸ್ಯರು ಮತ್ತು ಮೂವರು ಶಾಸಕರು, ಇಬ್ಬರು ಸಂಸದರು ಸೇರಿ ಐದು ಜನ ಜನಪ್ರತಿನಿಧಿಗಳಿಗೆ ಮತದಾನದ ಹಕ್ಕಿದೆ. ಹೀಗಾಗಿ ಈ ಬಾರಿ ಕನ್ನಡದವರನ್ನೇ ಮೇಯರ್, ಉಪ ಮೇಯರ್ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ , ಅವರ ಸಹೋದರ ಲಖನ್ ಜಾರಕಿಹೊಳಿ ಬಣ ಮತ್ತು ಅತ್ತ ಮಾಜಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಫಿರೋಜ್ ಸೇಠ್ ನೇತೃತ್ವದ ಬಣವು ರಣತಂತ್ರ ರೂಪಿಸುತ್ತಿದೆ.
ಇಂದು ಶಾಸಕ ಸೇಠ್ ಮನೆಯಲ್ಲಿ ಸತೀಶ ಜಾರಕಿಹೊಳಿ ತಮ್ಮ ಆಪ್ತ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿ, ಮೊದಲ ಸುತ್ತಿನ ಚರ್ಚೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.