ಪರ್ರಿಕರ್ ರಕ್ಷಣಾ ಮಂತ್ರಿಯಾದರೆ ದೇಶದಲ್ಲಿ ಅವ್ಯವಸ್ಥೆ ಉಂಟಾಗುತ್ತದೆ: ಠಾಕ್ರೆ ಟೀಕೆ

By Suvarna Web DeskFirst Published Aug 18, 2017, 6:39 PM IST
Highlights

ದೇಶದ ರಕ್ಷಣಾ ಮಂತ್ರಿಯ ಹುದ್ದೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಗೋವಾ ಸಿಎಂ ಮನೋಹರ್ ಪರ್ರಿಕರ್ ಇದನ್ನು ಗಂಭಿರವಾಗಿ ತೆಗೆದುಕೊಳ್ಳದೇ ಇದ್ದಿದ್ದರಿಂದ ಅವರ ಕಾಲಾವಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಗುಡುಗಿದ್ದಾರೆ.

ನವದೆಹಲಿ (ಆ.18): ದೇಶದ ರಕ್ಷಣಾ ಮಂತ್ರಿಯ ಹುದ್ದೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಗೋವಾ ಸಿಎಂ ಮನೋಹರ್ ಪರ್ರಿಕರ್ ಇದನ್ನು ಗಂಭಿರವಾಗಿ ತೆಗೆದುಕೊಳ್ಳದೇ ಇದ್ದಿದ್ದರಿಂದ ಅವರ ಕಾಲಾವಧಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಗುಡುಗಿದ್ದಾರೆ.

ಪರ್ರಿಕರ್ ಅವರು ರಕ್ಷಣಾ ಮಂತ್ರಿಯಾಗಿದ್ದಾಗ ತಮ್ಮ ಹುದ್ದೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ಗೋವಾ ಉಪ ಚುನಾವಣೆಯಲ್ಲಿ ತಾನು ಸೋತರೆ ಮತ್ತೆ ರಕ್ಷಣಾ ಮಂತ್ರಿಯಾಗುತ್ತೇನೆ ಎಂದಿದ್ದರು. ಇದನ್ನು ಕೇಳಿ ನಮಗೆಲ್ಲಾ ಆಘಾತ! ಒಂದು ವೇಳೆ ಅವರು ರಕ್ಷಣಾ ಮಂತ್ರಿಯಾದರೆ ದೇಶದಲ್ಲಿ ಅವ್ಯವಸ್ಥೆ ಉಂಟಾಗುತ್ತದೆ ಎಂದಿದ್ದಾರೆ. ಅದೇ ರೀತಿ ಪೂರ್ಣಾವಧಿ ರಕ್ಷಣಾ  ಮಂತ್ರಿಯನ್ನು ನೇಮಕ ಮಾಡದೇ ಇರುವುದಕ್ಕೆ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  

click me!