
ನವದೆಹಲಿ (ಡಿ.15): ನೋಟು ನಿಷೇಧ ಹಾಗೂ ಅಗಸ್ಟಾ ವೆಸ್ಟ್’ಲ್ಯಾಂಡ್ ಹಗರಣಗಳ ಗದ್ದಲವು ಇಂದಿನ ಸಂಸತ್ತು ಕಲಾಪಗಳನ್ನು ಬಲಿ ಪಡೆದಿದೆ.
ಲೋಕಸಭೆಯ ಕಲಾಪಗಳು ಆರಂಭವಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕ ನೋಟು ನಿಷೇಧದ ಬಗ್ಗೆ ಕೂಡಲೇ ಚರ್ಚೆಯಾಗಬೇಕೆಂದು ಆಗ್ರಹಿಸಿದರು. ಅದಕ್ಕೆ ತೃಣಮೂಲ ಕಾಂಗ್ರೆಸಿನ ನಾಯಕರು ಕೂಡಾ ಧ್ವನಿಗೂಡಿಸಿದರು.
ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ಅನಂತ್ ಕುಮಾರ್, ಪ್ರತಿಪಕ್ಷಗಳು ನೊಟು ನಿಷೇಧ ಚರ್ಚೆಯಲ್ಲಿ ಆಸಕ್ತರಾಗಿಲ್ಲವೆಂದೂ, ಅವುಗಳು ಕಪ್ಪುಹಣವನ್ನು ಬಿಳಿಗೊಳಿಸುತ್ತಿವೆಯೆಂದು ಆರೋಪಿಸಿದ್ದಾರೆ. ಜತೆಗೆ ಅಗಸ್ಟಾ ವೆಸ್ಟ್’ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಬಗ್ಗೆಯೂ ಚರ್ಚೆಯಾಗಬೇಕೆಂದು ಹೇಳಿದ್ದಾರೆ. ಬಳಿಕ ಆಡಳಿತ ಪಕ್ಷ ಹಾಗೂ ವಿಪಕ್ಷ ಸಂಸದರ ನಡುವೆ ಕೊಲಾಹಲ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್ ಕಲಾಪಗಳನ್ನು ಮುಂದೂಡಿದರು.
ಅದೇ ರೀತಿ ರಾಜ್ಯಸಭೆಯಲ್ಲೂ ನೋಟು ನಿಷೇಧ ಕ್ರಮದ ಬಗ್ಗೆ ಉಂಟಾದ ಗದ್ದಲಲದಿಂದ ಕಲಾಪಗಳನ್ನು ನಾಳೆವರೆಗೆ ಮುಂದೂಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.