
ಬೆಂಗಳೂರು(ಫೆ.27): ನಾಲ್ಕು ವರ್ಷಗಳ ಪೂರ್ಣಗೊಳಿಸಿದ ಸಚಿವರನ್ನು ಕೈಬಿಡಲಾಗುತ್ತದೆ ಎಂಬ ಅಜೆಂಡಾ ಕೊನೆಯ ಕ್ಷಣದಲ್ಲಿ ಕೈಬಿಡಲ್ಪಟ್ಟು ಯಾವುದೇ ಚರ್ಚೆಯಿಲ್ಲದೇ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಿನ್ನೆ ನಡೆಯಿತು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ನಿನ್ನೆ ಸಭೆಯಲ್ಲಿ ಸುಳಿವು ದೊರೆತಿದ್ದು, ಸದ್ಯಕ್ಕೆ ಹಿರಿಯ ಸಚಿವರನ್ನು ಕೈಬಿಡದಿರಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಉಪಚುನಾವಣೆ ಬಳಿಕ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿಮಾಡಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.
ಸಿದ್ದರಾಮಯ್ಯ ಸಂಪುಟದಲ್ಲಿ ನಾಲ್ಕು ವರ್ಷ ಪೂರ್ಣಗೊಳಿಸಿದ ಸಚಿವರಿಗೆ ಕೊಕ್ ಕೊಡಲಾಗುತ್ತೆ. ಇದು ಮೊನ್ನೆಯವರೆಗೂ ಇದ್ದ ವದಂತಿ.. ನಿನ್ನೆ, ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ವದಂತಿಗೆ ತೆರೆ ಬಿದ್ದಿದ್ದು.. ಸದ್ಯಕ್ಕೆ ಇಂಥ ಸಾಹಸಕ್ಕೆ ಕೈ ಹಾಕದಿರಲು ನಿರ್ಧರಿಸಲಾಯಿತು.
ನಾಲ್ಕು ವರ್ಷಗಳಲ್ಲಿನ ಸರ್ಕಾರದ ಪ್ರಣಾಳಿಕೆಯ ಅನುಷ್ಠಾನದ ಅಂಶಗಳ ಚರ್ಚೆ ಸೇರಿದಂತೆ ಕೆಲ ಮಹತ್ವದ ವಿಚಾರ ಇವತ್ತಿನ ಸಭೆಯಲ್ಲಿ ಚರ್ಚೆಗೆ ಬಂತು.. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಸುಳಿವು ನೀಡಿ ಪರಮೇಶ್ವರ್'ಗೆ ಶಾಕ್ ನೀಡಲಾಯ್ತು.
ಹಿರಿಯ ಸಚಿವರನ್ನು ಕೈಬಿಡದಿರಲು ತೀರ್ಮಾನ
ಸಚಿವರಾಗಿದ್ದುಕೊಂಡೇ ಪಕ್ಷದ ಸಂಘಟನೆಗೆ ಗಮನ ಕೊಡಲಿ
ಉಪ ಚುನಾವಣೆ ಬಳಿಕ ಖಾಲಿ ಇರುವ 2 ಸ್ಥಾನಗಳ ಭರ್ತಿ
ಪಕ್ಷದ ವಿರುದ್ಧ ಮಾತನಾಡುವ ಹಿರಿಯ ನಾಯಕರಿಗೆ ಕಡಿವಾಣ
ಡೈರಿ ಬಗ್ಗೆ ಸಂದರ್ಭ ಸಿಕ್ಕಿದಾಗಲೆಲ್ಲಾ ಕೌಂಟರ್ ಅಟ್ಯಾಕ್
ಕೆಪಿಸಿಸಿಗೆ ಹೊಸ ಸ್ವರೂಪ ಕೊಡುವ ಬಗ್ಗೆ ಅಗತ್ಯ ಕ್ರಮ
ಉತ್ತರ ಕರ್ನಾಟಕ ಭಾಗದಲ್ಲಿ ಎರಡು ದಿನ ರಾಜ್ಯ ಕಾರ್ಯಕಾರಿಣಿ
ಗೊಂದಲ ಇರುವ ಕೆಲವು ಜಿಲ್ಲಾಧ್ಯಕ್ಷರುಗಳ ಬದಲಾವಣೆ
ಶಾಸಕರು ಮುಂದಿನ ಬಾರಿ ಪಕ್ಷದಿಂದ ಸ್ಪರ್ಧಿಸುವ ಬಗ್ಗೆ ಖಚಿತತೆ
ಹೀಗೆ ಮಹತ್ವದ ನಿರ್ಧಾರ ಕೈಗೊಂಡ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹಿರಿಯ ಸಚಿವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.
ಒಮ್ಮೆ ಸಂಪುಟ ಪುನಾರಚನೆ ವೇಳೆ ಎದ್ದ ಬಿರುಗಾಳಿಯಿಂದ ಸಿದ್ದರಾಮಯ್ಯ ಸರ್ಕಾರವೇ ಅಲುಗಾಡಿ ಹೋಗಿದೆ. ಅದರಿಂದ ಬುದ್ಧಿ ಕಲಿತ ಸರ್ಕಾರ ಇದೀಗ ಹಿರಿಯ ಸಚಿವರನ್ನು ಕೈಬಿಡುವ ನಿರ್ಧಾರದಿಂದ ಹಿಂದೆ ಸರಿದಿದೆ. ಅಲ್ಲಿಗೆ ಕುರ್ಚಿ ಕಳೆದುಕೊಳ್ಳುವ ಆತಂಕದಲ್ಲಿದ್ದ ಹಿರಿಯ ಸಚಿವರು ಸೇಫ್.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.