
ಚೆನ್ನೈ(ಫೆ.08): ಕೊನೆಗೂ ಅಮ್ಮನ ವಿಧೇಯ ತಮಿಳುನಾಡು ಉಸ್ತುವಾರಿ ಸಿಎಂ ಪನ್ನೀರ್ ಸೆಲ್ವಂ ಚಿಕ್ಕಮ್ಮ ಶಶಿಕಲಾ ನಟರಾಜನ್'ಗೆ ದೊಡ್ಡ ಮಟ್ಟದಲ್ಲೇ ಸಡ್ಡು ಹೊಡೆದಿದ್ದಾರೆ. ಜಯಲಲಿತಾ ಅನಾರೋಗ್ಯದಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಒಂದು ದಿನವೂ ನನಗೆ ಅವರನ್ನು ನೋಡಲು ಅವಕಾಶ ನೀಡಲಿಲ್ಲ . ಪ್ರತಿ ದಿನ ನಮ್ಮ ಮನೆಯವರು 'ಅಮ್ಮನನ್ನು ನೋಡಿದ್ರಾ' ಅಂತಾ ಕೇಳುತ್ತಿದ್ದರು. ಇನ್ಫೆಕ್ಷನ್ ಆಗುತ್ತೆ ಎಂಬ ಕಾರಣಕ್ಕೆ ನಾನು ಜಯಲಲಿತಾರನ್ನು ನೋಡಲಿಲ್ಲ ಅಂತಾ ಸುಳ್ಳು ಹೇಳುತ್ತಿದ್ದೆ'' ಎಂದು ಪನ್ನೀರ್ ಸೆಲ್ವಂ ಹೇಳಿಕೊಂಡಿದ್ದಾರೆ .
ನನ್ನಿಂದ ಒತ್ತಾಯಪೂರ್ವಕವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಯಿತು ಎಂದು ಆರೋಪಿಸಿರುವ ಪನ್ನೀರ್ ಸೆಲ್ವಂ ಅವರನ್ನು ಎಐಎಡಿಎಂಕೆ ಪಕ್ಷ ಕಳೆದ ರಾತ್ರಿ ಪಕ್ಷದ ಖಜಾಂಚಿ ಹುದ್ದೆಯಿಂದ ಕೆಳಗಿಳಿಸಿದೆ. ಪನ್ನೀರ್ ಸೆಲ್ವಂ ಪಕ್ಷದ ವಿರುದ್ಧ ಸಡ್ಡು ಹೊಡೆದಿರುವ ಹಿಂದೆ ಡಿಎಂಕೆ ಕೈವಾಡವಿದೆ ಎಂದು ಶಶಿಕಲಾ ಮತ್ತವರ ಬೆಂಬಲಿಗರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪನ್ನೀರ್ ಸೆಲ್ವಂ, ತಮ್ಮ ಈ ನಡೆಯ ಹಿಂದೆ ಪ್ರತಿಪಕ್ಷಗಳ ಕೈವಾಡವಿದೆ ಎಂದು ಶಶಿಕಲಾ ಗುಂಪು ಆರೋಪಿಸಿದೆ. ಯಾವುದೇ ನಾಯಕ ಬಂಡಾಯ ಎದ್ದಾಗ ಇಂತಹ ಆರೋಪಗಳು ಸಹಜ ಎಂದು ಪನ್ನೀರ್ ಹೇಳಿದ್ದಾರೆ. ಎಐಎಡಿಎಂಕೆ ಪಕ್ಷ, ಜಯಲಲಿತಾ ಅವರಿಗೆ ನಿಜವಾದ ವಿಶ್ವಾಸ ಪಾತ್ರನಾದ ವ್ಯಕ್ತಿ ತಾವೇ ಎಂದು ಪನ್ನೀರ್ ಹೇಳಿಕೊಂಡಿದ್ದಾರೆ.
ನಾನು ಈವರೆಗೆ ಬಾಯ್ಬಿಟ್ಟಿರುವುದು ಶೇಕಡ 10 ರಷ್ಟು ಮಾತ್ರ. ಇನ್ನೂ ಶೇಕಡ 90ರಷ್ಟು ವಿಷಯ ಹೇಳೋದಿದೆ. ಅವೆಲ್ಲವನ್ನು ಬಿಚ್ಚಿಡುವಂತೆ ಮಾಡಬೇಡಿ ಎಂದು ವಿರೋಧಿಗಳನ್ನು ಪನ್ನೀರ್ ಎಚ್ಚರಿಸಿದ್ದಾರೆ. ಕೆಲ ಗಂಟೆಗಳಲ್ಲಿ ಒಂದೆರಡು ದಿನಗಳಲ್ಲಿ ತಾವು ಎಂಬುದನ್ನು ತೋರಿಸುವುದಾಗಿ ಸವಾಲಿನ ಧಾಟಿಯಲ್ಲಿ ಪನ್ನೀರ್ ಮಾತನಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.