
ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ.ಬಂಗಾಳದ ಬಿರ್ಹೂಮ್’ನಲ್ಲಿ ಕಳೆದ ರಾಮನವಮಿಯಂದು ಆಯೋಜಿಸಿದ್ದ ಮೆರವಣಿಗೆಯಲ್ಲಿ ಮಕ್ಕಳ ಕೈಗೆ ಖಡ್ಗಗಳನ್ನು ಕೊಟ್ಟಿರುವುದರ ಬಗ್ಗೆ ಮಕ್ಕಳ ಆಯೋಗವು ವರದಿಯನ್ನು ಕೇಳಿದೆ.
ಘಟನೆಗೆ ಸಂಬಂಧಿಸಿದಂತೆ ವರದಿ ಕಳುಹಿಸುವಂತೆ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗೆ ಸೂಚಿಸಲಾಗಿದೆಯೆಂದು ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗದ ಅಧ್ಯಕ್ಷೆ ಅನನ್ಯ ಚಟರ್ಜಿ ಹೇಳಿದ್ದಾರೆಂದು ದಿ ಹಿಂದೂ ವರದಿ ಮಾಡಿದೆ.
ರಾಮನವಮಿ ದಿನದಂದು ಆರೆಸ್ಸೆಸ್ ಹಮ್ಮಿಕೊಂಡಿದ್ದ ಮೆರವಣಿಗೆಗಳಲ್ಲಿ ಮಕ್ಕಳ ಕೈಯಲ್ಲಿ ಖಡ್ಗಗಳನ್ನು ಹಿಡಿದು ಸಾಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಆರೆಸ್ಸೆಸ್ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದ ಪ.ಬಂಗಾಳದ ನಾಗರಿಕ ಗುಂಪುಗಳು ಹಾಗೂ ರಾಜಕೀಯ ಪಕ್ಷಗಳು, ಪ.ಬಂಗಾಳದಲ್ಲಿ ಯಾವ ಸಂಸ್ಕೃತಿಯನ್ನು ಆರೆಸ್ಸೆಸ್ ಹುಟ್ಟುಹಾಕಬಯಸುತ್ತದೆ ಎಂದು ಪ್ರಶ್ನಿಸಿದ್ದರು.
ಆದರೆ ಆರೆಸ್ಸೆಸ್ ಕ್ರಮವನ್ನು ಸಮರ್ಥಿಸಿರುವ ಬಿಜೆಪಿ, ಖಡ್ಗ ಹಾಗೂ ಚಾಕುಗಳನ್ನು ಶಸ್ತ್ರಾಸ್ತ್ರಗಳಾಗಿ ಪರಿಗಣಿಸುವಂತಿಲ್ಲವೆಂದು ಹೇಳಿದೆ.
(ಚಿತ್ರಕೃಪೆ: ಹಿಂದೂಸ್ತಾನ್ ಟೈಮ್ಸ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.