ಪನಾಮಾಗೇಟ್: ನವಾಜ್ ಷರೀಫ್ ಹಾಗೂ ಕುಟುಂಬಸ್ಥರ ಮೇಲೆ ತನಿಖೆಗೆ ಸುಪ್ರೀಂ ಆದೇಶ

By Suvarna Web DeskFirst Published Apr 20, 2017, 10:15 AM IST
Highlights

ಪನಾಮಾ ಪತ್ರಿಕೆ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಕುಟುಂಬಸ್ಥರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಬೇಕೆಂದು ಪಾಕಿಸ್ಥಾನ ಸುಪ್ರೀಂಕೋರ್ಟ್ ಜಂಟಿ ತನಿಖಾ ದಳಕ್ಕೆ (ಜಿಐಟಿ) ಆದೇಶಿಸಿದೆ.

ನವದೆಹಲಿ (ಏ.20): ಪನಾಮಾ ಪತ್ರಿಕೆ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಕುಟುಂಬಸ್ಥರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಬೇಕೆಂದು ಪಾಕಿಸ್ಥಾನ ಸುಪ್ರೀಂಕೋರ್ಟ್ ಜಂಟಿ ತನಿಖಾ ದಳಕ್ಕೆ (ಜಿಐಟಿ) ಆದೇಶಿಸಿದೆ.

ಪಾಕ್ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಇಬ್ಬರು ಮಕ್ಕಳಿಗೆ ಜಿಐಟಿ ಮುಂದೆ ಹಾಜರಾಗುವಂತೆ ಕೋರ್ಟ್ ಸೂಚಿಸಿದೆ.ಷರೀಫ್ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆಯೇ ಎಂದು ತನಿಖೆ ನಡೆಸಿ ಪೂರೈಸಲು ತನಿಖಾ ತಂಡಕ್ಕೆ 2 ತಿಂಗಳ ಕಾಲಾವಕಾಶ ನೀಡಲಾಗಿದೆ.

 ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು ಈ ಆದೇಶ ನೀಡಿದೆ. ಇದರಲ್ಲಿ ಇಬ್ಬರು ನ್ಯಾಯಾಧೀಶರು ಷರೀಫ್ ವಿರುದ್ಧ ತೀರ್ಮಾನ ನೀಡಿದರೆ ಮೂವರು ನ್ಯಾಯಾಧೀಶರು ಜಿಐಟಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

click me!