ಪಾನ್ ಕಾರ್ಡ್’ಗೆ ಅರ್ಜಿ ಸಲ್ಲಿಸುವ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಕಾಲಂ

By Suvarna Web DeskFirst Published Apr 11, 2018, 1:32 PM IST
Highlights

ಪಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ತೃತೀಯ ಲಿಂಗಿಗಳು ತಾವು ಸ್ವತಂತ್ರ ಲಿಂಗಿಗಳು ಎಂದು ನಮೂದಿಸಲು ನೆರವಾಗುವ ಆದಾಯ ತೆರಿಗೆ ನಿಯಮಾವಳಿಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.

ನವದೆಹಲಿ: ಪಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ತೃತೀಯ ಲಿಂಗಿಗಳು ತಾವು ಸ್ವತಂತ್ರ ಲಿಂಗಿಗಳು ಎಂದು ನಮೂದಿಸಲು ನೆರವಾಗುವ ಆದಾಯ ತೆರಿಗೆ ನಿಯಮಾವಳಿಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.

ಪಾನ್ ಅರ್ಜಿಯಲ್ಲಿ ತೃತೀಯ ಲಿಂಗಿಗಳಿಗಾಗಿ ನೂತನ ಟಿಕ್ ಬಾಕ್ಸ್ ವೊಂದನ್ನು ಕಲ್ಪಿಸಲಾಗಿದ್ದು, ಈ ಬಗ್ಗೆ ಆದಾಯ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಅಧಿಸೂಚನೆ ಹೊರಡಿಸಿದೆ.

ಇದುವರೆಗೂ ಪಾನ್ ಕಾರ್ಡ್‌ಗಾಗಿ ಸಲ್ಲಿಕೆ ಮಾಡುವ ಅರ್ಜಿಯಲ್ಲಿ ಪುರುಷ ಮತ್ತು ಮಹಿಳೆಯರು ಎಂಬ ಕಾಲಂ ಮಾತ್ರವೇ ಇತ್ತು. ಇದೀಗ ನೂತನವಾಗಿ ಸ್ವತಂತ್ರ ಲಿಂಗಿಗಳು ಎಂಬ ಕಾಲಂ ಅನ್ನು ಕಲ್ಪಿಸಲಾಗಿದೆ.

click me!