ವೈರಲ್ ಚೆಕ್: ಭಾರತದ ತ್ರಿವರ್ಣ ಧ್ವಜವನ್ನು ನಡುರಸ್ತೆಯಲ್ಲಿ ಸುಡಲಾಯ್ತಾ?

By Web DeskFirst Published May 10, 2019, 10:05 AM IST
Highlights

ಸದ್ಯ ತಲೆಗೆ ಮುಸ್ಲಿಮರು ತೊಡುವ ಟೋಪಿ ತೊಟ್ಟು, ಗಡ್ಡ ಬಿಟ್ಟಿರುವ ಇಬ್ಬರು ವ್ಯಕ್ತಿಗಳು ಭಾರತದ ತ್ರಿವರ್ಣ ಧ್ವಜವನ್ನು ನಡುರಸ್ತೆಯಲ್ಲಿ ಸುಡುತ್ತಿರುವ ಫೋಟೋ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಅಸಲಿಯತ್ತು? 

ಸದ್ಯ ತಲೆಗೆ ಮುಸ್ಲಿಮರು ತೊಡುವ ಟೋಪಿ ತೊಟ್ಟು, ಗಡ್ಡ ಬಿಟ್ಟಿರುವ ಇಬ್ಬರು ವ್ಯಕ್ತಿಗಳು ಭಾರತದ ತ್ರಿವರ್ಣ ಧ್ವಜವನ್ನು ನಡುರಸ್ತೆಯಲ್ಲಿ ಸುಡುತ್ತಿರುವ ಫೋಟೋ ವೈರಲ್‌ ಆಗುತ್ತಿದೆ.

‘ಕಟ್ಟರ್‌ ಹಿಂದು’ ಎಂಬ ಪೇಸ್‌ಬುಕ್‌ ಪೇಜ್‌ ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಭಾರತದ ರಾಷ್ಟ್ರಪತಿಗಳಿಗೊಂದು ಮನವಿ; ತ್ರಿವರ್ಣ ಧ್ವಜವನ್ನು ಸುಟ್ಟಇವರನ್ನೂ ನಡುರಸ್ತೆಯಲ್ಲಿ ಜೀವಂತವಾಗಿ ಸುಡಬೇಕು’ ಎಂದು ಒಕ್ಕಣೆ ಬರೆಯಲಾಗಿದೆ.

ಈ ಪೋಸ್ಟ್‌ 14,000 ಬಾರಿ ಶೇರ್‌ ಆಗಿದೆ. ಆದರೆ ವೈರಲ್‌ ಆಗಿರುವ ಸಂದೇಶದಲ್ಲಿ ಈ ಘಟನೆ ನಡೆದಿದ್ದೆಲ್ಲಿ ಎಂಬ ಯಾವ ವಿವರವೂ ಇಲ್ಲ. ಆದರೆ ಹಲವು ನೆಟ್ಟಿಗರು ಈ ಘಟನೆ ಭಾರತದಲ್ಲೇ ನಡೆದಿದೆ ಎಂದು ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಚಿತ್ರದ ವಾಸ್ತವ ಏನೆಂದು ತಿಳಿಯಲು ಇಂಡಿಯಾ ಟು ಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌, ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಈ ಘಟನೆ ಭಾರತದಲ್ಲಿ ನಡೆದಿಲ್ಲ, ಪಾಕಿಸ್ತಾನದಲ್ಲಿ ನಡೆದಿದ್ದು ಎಂದು ತಿಳಿದುಬಂದಿದೆ.

‘ಬ್ಲಾಗರ್‌ ಸ್ಪೀಕ್‌’ ಹೆಸರಿನ ವೆಬ್‌ಸೈಟ್‌ನಲ್ಲಿ ‘ಪಾಕಿಸ್ತಾನ ಪ್ರತಿಭಟನಾಕಾರರು ಮೋದಿ ಚಿತ್ರವಿರುವ ಪೋಸ್ಟರ್‌ಗಳನ್ನು ಸುಟ್ಟಹಾಕಿದ್ದಾರೆ’ ಎಂಬ ಶೀರ್ಷಿಕೆಯಡಿ ಇದಕ್ಕೆ ಸಂಬಂಧಪಟ್ಟಹಲವಾರು ಫೋಟೋಗಳನ್ನು ಪೋಸ್ಟ್‌ ಮಾಡಿದೆ. ಅಸೋಸಿಯೇಟ್‌ ಪ್ರೆಸ್‌ನಲ್ಲಿ ಇದರ ಮೂಲ ಚಿತ್ರಗಳು ಲಭ್ಯವಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ಧ್ವಜವನ್ನೂ ಸುಡಲಾಗಿದೆ ಎಂದು ಅದರಲ್ಲಿ ಹೇಳಲಾಗಿದೆ.

- ವೈರಲ್ ಚೆಕ್ 
 

click me!