ಜಲಂತರ್ಗಾಮಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಪಾಕ್

Published : Jan 09, 2017, 03:53 PM ISTUpdated : Apr 11, 2018, 01:01 PM IST
ಜಲಂತರ್ಗಾಮಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಪಾಕ್

ಸಾರಾಂಶ

ಪಾಕ್ ಈಗಾಗಲೇ ಭೂಮಿಯಿಂದ ಭೂಮಿಗೆ ಚಿಮ್ಮುವ ಹಲವು ಅಣ್ವಸ್ತ್ರಗಳನ್ನು ಯಶಸ್ವಿಯಾಗಿ ನಡೆಸಿದೆ.

ನವದೆಹಲಿ(ಜ.9): ಪಾಕಿಸ್ತಾನವು ಮೊದಲ ಬಾರಿಗೆ ಜಲಂತರ್ಗಾಮಿ ಅಣ್ವಸ್ತ್ರ ಬಾಬರ್-3ಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.  ಸಮುದ್ರದ ಆಳದಲ್ಲಿ ಸಂಚಾರಿ ಉಡಾವಣಾ ಕೇಂದ್ರದಿಂದ ಈ ಪರೀಕ್ಷೆ ನಡೆಸಲಾಗಿದ್ದು, ಅಣ್ವಸ್ತ್ರವು 450 ಕಿ.ಮೀ ಸಾಮರ್ಥ್ಯವನ್ನು ಹೊಂದಿದೆ.

ಪಾಕ್ ಈಗಾಗಲೇ ಭೂಮಿಯಿಂದ ಭೂಮಿಗೆ ಚಿಮ್ಮುವ ಹಲವು ಅಣ್ವಸ್ತ್ರಗಳನ್ನು ಯಶಸ್ವಿಯಾಗಿ ನಡೆಸಿದೆ. ಆದರೆ ಜಲಂತರ್ಗಾಮಿ ಅಣ್ವಸ್ತ್ರವನ್ನು ಪರೀಕ್ಷೆ ನಡೆಸಿರಲಿಲ್ಲ. ಹಿಂದೂ ಮಹಾಸಾಗರದಲ್ಲಿ  ಅಪರಿಚಿತ ಸ್ಥಳವೊಂದರಲ್ಲಿ ಈ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಯನ್ನು ಯಶಸ್ವಿಗೊಳಿಸಿರುವುದಕ್ಕೆ ಪಾಕ್ ಅಧ್ಯಕ್ಷ ಮಮ್ಮೂನ್ ಹುಸೇನ್, ಪ್ರಧಾನಿ ನವಾಜ್ ಷರೀಫ್, ಸೇನಾ ಮುಖ್ಯಸ್ಥ ಜ. ಕ್ವಾಮರ್ ಜಾವೇದ್ ಬೇಜ್ವಾ ಅಭಿನಂದನೆ ಸಲ್ಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ