
ನವದೆಹಲಿ (ಜ.14): ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯ ವಿರುದ್ಧ ಪಶ್ತೂನ್‌ನ ಹಕ್ಕುಗಳ ಪ್ರತ್ಯೇಕತಾವಾದಿ ಹೋರಾಟಗಾರರೊಬ್ಬರು ಗುರುತರ ಆರೋಪ ಮಾಡಿದ್ದಾರೆ.
ಪಾಕಿಸ್ತಾನದ ನವಾಜ್ ಶರೀಫ್ ನೇತೃತ್ವದ ಸರ್ಕಾರ ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸುತ್ತಿದೆ. ಪಾಕ್ ಸೈನಿಕರು ಸ್ವಾತ್ ಮತ್ತು ವಜರಿಸ್ತಾನ್ ಏರಿಯಾದಲ್ಲಿ ಹಲವಾರು ಮನೆಗಳನ್ನು ಧ್ವಂಸಗೊಳಿಸಿ ನೂರಾರು ಪಶ್ತೂನ್ ಮಹಿಳೆಯರನ್ನು ಅಪಹರಿಸಿ ಲೈಂಗಿಕತೆಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅಫ್ಘಾನಿಸ್ತಾನದಲ್ಲಿರುವ ಪಶ್ತೂನ್ ಪ್ರತ್ಯೇಕತಾವಾದಿ ಉಮರ್ ದೌಡ್ ಖಟ್ಟಕ್ ಆರೋಪಿಸಿದ್ದಾರೆ.
ಸ್ವಾತ್ ಮತ್ತು ವಜಿರಿಸ್ತಾನ್‌ನಲ್ಲಿ ಯುವತಿಯರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಪಾಕ್ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅಲ್ಲಿನ ನೂರಾರು ಯುವತಿಯರನ್ನು ಅಪಹರಿಸಿಕೊಂಡು ಹೋಗಿದ್ದಾರೆ. ಅಲ್ಲದೆ ಅಪಹರಿಸಿಕೊಂಡು ಹೋಗಿರುವ ಯುವತಿಯರನ್ನು ಲಾಹೋರ್‌ನಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಉಮರ್ ದೂರಿದ್ದಾರೆ.
ಹಣ ಹುಟ್ಟುಹಾಕಲು ಪಶ್ತೂನ್ ಮಹಿಳೆಯನ್ನು ಮಾಂಸ ದಂಧೆಗೆ ಪಾಕಿಸ್ತಾನ ತಳ್ಳಿದೆ. ಅಲ್ಲದೆ ಇದೆಕ್ಕೆಲ್ಲಾ ತಮ್ಮ ಬಳಿ ದಾಖಲೆ ಮತ್ತು ಸಾಕ್ಷಿ ಇವೆ. ಪಾಕಿಸ್ತಾನಿ ಸೇನೆ ಬುಡಕಟ್ಟು ಪ್ರದೇಶದಲ್ಲಿನ ಮಹಿಳೆಯರ ಮೇಲೆ ನೀಚ ಕೃತ್ಯ ಎಸಗುವ ಮೂಲಕ ಪದೇ ಪದೇ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಉಮರ್ ಕಿಡಿಕಾರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.