ಗದ್ದಲ ಜಾಸ್ತಿ ಅಂತಾ ಮುಟ್ಲಿಲ್ಲ: ಪಾಕ್ ತೂಕದ ಮನುಷ್ಯ ಇನ್ನಿಲ್ಲ!

Published : Jul 08, 2019, 07:06 PM IST
ಗದ್ದಲ ಜಾಸ್ತಿ ಅಂತಾ ಮುಟ್ಲಿಲ್ಲ: ಪಾಕ್ ತೂಕದ ಮನುಷ್ಯ ಇನ್ನಿಲ್ಲ!

ಸಾರಾಂಶ

ಪಾಕಿಸ್ತಾನದ ಅತ್ಯಂತ ತೂಕದ ಮನುಷ್ಯ ಇನ್ನಿಲ್ಲ| ಸೂಕ್ತ ಚಿಕಿತ್ಸೆ ಸಿಗದೇ ಮೃತಪಟ್ಟ ನೂರ್-ಉಲ್-ಹಸನ್| ಬರೋಬ್ಬರಿ 330 ಕೆಜಿ ತೂಕವಿದ್ದ ನೂರ್-ಉಲ್-ಹಸನ್| ICUನಲ್ಲಿ ಸೂಕ್ತ ಚಿಕಿತ್ಸೆ ನೀಡದೇ ವೈದ್ಯರ ನಿರ್ಲಕ್ಷ್ಯ| ಪಾಕ್ ಸೇನಾ ಮುಖ್ಯಸ್ಥರ ಆದೇಶದ ಮೇರೆಗೆ ಲಾಹೋರ್ ಆಸ್ಪತ್ರೆಗೆ ದಾಖಲಾಗಿದ್ದ ಹಸನ್|

ಇಸ್ಲಾಮಾಬಾದ್(ಜು.08): ಪಾಕಿಸ್ತಾನದ ಅತ್ಯಂತ ತೂಕದ ಮನುಷ್ಯ ಎಂದೇ ಖ್ಯತಿಯಾಗಿದ್ದ ನೂರ್-ಉಲ್-ಹಸನ್  ಮೃತಪಟ್ಟಿದ್ದಾರೆ. ಲಾಹೋರ್'ನ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ ಹಸನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೆರೋಬ್ಬರಿ 330 ಕೆಜಿ ತೂಕವಿದ್ದ ಇಲ್ಲಿನ ಸಕಿದಾಬಾದ್’ನ 55 ವರ್ಷದ ನೂರ್-ಉಲ್-ಹಸನ್ ಪಾಕಿಸ್ತಾನದ ಅತ್ಯಂತ ತೂಕದ ವ್ಯಕ್ತಿ ಎಂದೇ ಖ್ಯಾತಿಗಳಿಸಿದ್ದರು. ಇತ್ತೀಚಿಗೆ ಸೇನಾ ಹೆಲಿಕಾಪ್ಟರ್’ನಲ್ಲಿ ಹಸನ್ ಅವರನ್ನು ಲಾಹೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಖುದ್ದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಆದೇಶದ ಮೇರೆಗೆ ಹಸನ್ ಅವರನ್ನು ಲಾಹೋರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಬಳಿಕ ಹಸನ್ ಅವರನ್ನು ತುರ್ತು ನಿಗಾ ಘಟಕ(ICU)ಕ್ಕೆ ಶಿಫ್ಟ್ ಮಾಡಲಾಗಿತ್ತು. ಆದರೆ ICUನಲ್ಲಿದ್ದ ಮಹಿಳಾ ರೋಗಿಯೊಬ್ಬರು ಮೃತಪಟ್ಟ ಕಾರಣಕ್ಕೆ ಆಕೆಯ ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಹಸನ್ ಅವರ ಆರೋಗ್ಯ ವಿಚಾರಿಸಬೇಕಿದ್ದ ವೈದ್ಯರೂ ಕೂಡ ನಿರ್ಲಕ್ಷ್ಯ ತೋರಿದ ಪರಿಣಾಮ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಹಸನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ