
ನವದೆಹಲಿ: ಮರೆಯಲ್ಲಿ ನಿಂತು ಯೋಧರ ಮೇಲೆ ಗುಂಡಿನ ದಾಳಿ, ಗಡಿ ಪ್ರದೇಶದ ಜನರು ಹಾಗೂ ಗ್ರಾಮಗಳ ಮೇಲೆ ಶೆಲ್ ದಾಳಿ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಪಾಠ ಕಲಿಸಲು ಬಿಎಸ್‌ಎಫ್ ನಡೆಸುತ್ತಿರುವ ‘ಆಪರೇಷನ್ ಅರ್ಜುನ್’ ಕಾರ್ಯಾಚರಣೆಗೆ ಭರ್ಜರಿ ಫಲ ಸಿಕ್ಕಿದೆ.
ಈ ಕಾರ್ಯಾಚರಣೆಯಡಿ ಪಾಕಿಸ್ತಾನದ ‘ಗಣ್ಯ’ ವ್ಯಕ್ತಿಗಳ ಆಸ್ತಿ ಮೇಲೆ ಬಿಎಸ್’ಎಫ್ ನಡೆಸಿದ ದಾಳಿಯಿಂದ ವಿಚಲಿತವಾಗಿರುವ ಪಾಕಿಸ್ತಾನ, ದಾಳಿ ನಿಲ್ಲಿಸುವಂತೆ ಭಾರತಕ್ಕೆ ಮೊರೆ ಇಟ್ಟಿದೆ. ಜತೆಗೆ ತನ್ನ ಕಡೆಯಿಂದ ನಡೆಯುತ್ತಿದ್ದ ದಾಳಿಯನ್ನು ಸ್ಥಗಿತಗೊಳಿಸಿದೆ.
ಪಾಕಿಸ್ತಾನ ಸುಖಾಸುಮ್ಮನೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಅಧಿಕಾರಿಗಳು ‘ಆಪರೇಷನ್ ಅರ್ಜುನ್’ ಯೋಜನೆ ಸಿದ್ಧಪಡಿ ಸಿದರು. ಉಗ್ರರಿಗೆ ನೆರವಾಗಲು ಪಾಕಿಸ್ತಾನ ಸರ್ಕಾರ ಗಡಿಯಲ್ಲಿ ಸೇನೆ, ಐಎಸ್‌ಐನ ಹಾಲಿ ಹಾಗೂ ನಿವೃತ್ತ ಅಧಿಕಾರಿಗಳಿಗೆ ಜಾಗ ನೀಡಿದೆ.
ಇಂತಹ ಸ್ಥಳಗಳನ್ನೇ ಗುರುತಿಸಿ ಭಾರತ ದಾಳಿ ಮಾಡಿತು. ಇದರಿಂದ ಕಂಗಾಲಾದ ಪಾಕಿಸ್ತಾನದ ಪಂಜಾಬ್ ರೇಂಜರ್ ಅಜ್ಗರ್ ನವೀದ್ ಹಯಾತ್ ಬಿಎಸ್‌ಎಫ್ ನಿರ್ದೇಶಕ ರಿಗೆ ಕರೆ ಮಾಡಿ ದಾಳಿ ನಿಲ್ಲಿಸುವಂತೆ ಮನವಿ ಮಾಡಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.