
ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ಅವಧಿಪೂರ್ವ ಚುನಾವಣೆ ನಡೆಯುವುದು ಖಚಿತವಾ ಗುತ್ತಿದ್ದಂತೆಯೇ ಸಿಎಂ ಹುದ್ದೆಗೆ ಟವಲ್ ಹಾಕು ವವರ ಸಂಖ್ಯೆಯೂ ಹೆಚ್ಚತೊಡಗಿದೆ. ‘ಕರ್ನಾಟಕ ದಲ್ಲಿ ಎಚ್.ಡಿ. ಕುಮಾರಸ್ವಾಮಿಯಂಥವರೇ ಮುಖ್ಯಮಂತ್ರಿಯಾದರು.
ಹಾಗಿದ್ದರೆ ಮುಂಬರುವ ಚುನಾವಣೆಯಲ್ಲಿ ನಾವೇಕೆ ಸಿಎಂ ಆಗಬಾರದು?’ ಎಂದು ಮಜ್ಲಿಸ್ ಪಕ್ಷದ ಶಾಸಕ ಅಕ್ಬರುದ್ದೀನ್ ಒವೈಸಿ ಶುಕ್ರವಾರ ಸಭೆಯೊಂದರಲ್ಲಿ ಪ್ರಶ್ನೆ ಎಸೆದರು.
ಅಕ್ಬರುದ್ದೀನ್‌ರ ಅಣ್ಣ ಅಸಾದುದ್ದೀನ್ ಒವೈಸಿ ಈ ಪಕ್ಷದ ಅಧ್ಯಕ್ಷ. ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳದೇ ಕಣಕ್ಕಿಳಿಯಲು ಮಜ್ಲಿಸ್ ಪಕ್ಷ ನಿರ್ಧರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.