
ನವದೆಹಲಿ (ಸೆ.06): ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಸಮಾವೇಶ ಮುಗಿಸಿಕೊಂಡು ಮಯನ್ಮಾರ್’ಗೆ ಭೇಟಿ ನೀಡಿದ್ದಾರೆ. ಪ್ರಧಾನಿಗೆ ಇದು ಮೊದಲ ಮಯನ್ಮಾರ್ ಭೇಟಿಯಾಗಿದೆ. ಮಯನ್ಮಾರ್ ಕೌನ್ಸಲರ್ ಔಂಗ್ ಸಾನ್ ಸು ಕಿ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಉಭಯ ದೇಶಗಳ ಜಲಗಡಿ ಭದ್ರತೆ ಹಾಗೂ ಪ್ರಾದೇಶಿಕ ಸ್ಥಿರತೆಗೆ ಹೆಚ್ಚು ಒತ್ತು ನೀಡಬೇಕೆಂದು ಒತ್ತಾಯಿಸಿದ್ದಾರೆ.
ಯಾಂಗಾನ್’ನಲ್ಲಿರುವ ತುವುನ್ನಾ ಸ್ಟೇಡಿಯಂನಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ನಾನಿಲ್ಲಿ ಮಿನಿ ಭಾರತವನ್ನು ನೋಡುತ್ತಿದ್ದೇನೆ. ನೀವೆಲ್ಲಾ ಭಾರತದ ಬೇರೆ ಬೇರೆ ಭಾಗಗಳಿಂದ ಬಂದವರಾಗಿದ್ದೀರಿ.ನಿಮ್ಮನ್ನೆಲ್ಲಾ ನೋಡಿ ಬಹಳ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತ ಟೆಕ್ನಾಲಜಿಯತ್ತ ಧಾವಿಸುತ್ತಿದೆ. ನಾವು ಭಾರತವನ್ನು ಕೇವಲ ಸುಧಾರಣೆ ಮಾಡಲು ಬಯಸುತ್ತಿಲ್ಲ ಬದಲಿಗೆ ಪರಿವರ್ತನೆ ಮಾಡಲು ಬಯಸುತ್ತೇವೆ. ನವ ಭಾರತ ನಿರ್ಮಾಣವಾಗುತ್ತಿದೆ. ಸಾರಿಗೆ, ರೈಲ್ವೇ, ಸೋಲಾರ್’ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಬಂಡವಾಳ ಹಾಕಲಾಗುತ್ತಿದೆ. 75 ನೇ ಸ್ವಾತಂತ್ರ ದಿನಾಚರಣೆಯಂದು ನವ ಭಾರತ ನಿರ್ಮಾಣಕ್ಕೆ ನಾವು ಪ್ರಮಾಣ ಮಾಡಿದ್ದೇವೆ. ಭಡತನ ಮುಕ್ತ, ಜಾತಿಮುಕ್ತ, ಭಯೋತ್ಪಾದನೆ ಮುಕ್ತ, ಅಸಮಾನತೆ ಮುಕ್ತ ಭಾರತ ನಿರ್ಮಾಣ ಮಾಡಲಿದ್ದೇವೆ.
ವಿದೇಶದಲ್ಲಿ ತೊಂದರೆ ಅನುಭವಿಸುತ್ತಿರುವ ಭಾರತೀಯರಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡುತ್ತಾರೆ. ಜನರು ಟ್ವಿಟರ್’ನಲ್ಲಿ ತಮ್ಮ ಸಮಸ್ಯೆಯೊಂದಿಗೆ ಸುಷ್ಮಾ ಸ್ವರಾಜ್ ಬಳಿ ಬರುತ್ತಾರೆ. ಭಾರತೀಯ ರಾಯಭಾರವು ನಿಮಗೆ ಯಾವಾಗಲೂ ತೆರೆದಿರುತ್ತದೆ.ನಾವು ಸಾಗರೋತ್ತರ ಭಾರತೀಯರಿಗೆ Know India ವನ್ನು ಶುರು ಮಾಡಿದ್ದೇವೆ. ಇದಕ್ಕೂ ಮುನ್ನ ನರೇಂದ್ರ ಮೋದಿ ಆಯಪನ್ನು ಬಳಸಿಕೊಳ್ಳಿ. ಸಾಗರೋತ್ತರ ಭಾರತೀಯರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.