ಇದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಾಧನೆ

By Suvarna Web DeskFirst Published Feb 2, 2018, 8:07 AM IST
Highlights

ಹುಟ್ಟುವಾಗಲೇ ಹೃದಯದ ತೊಂದರೆಯಿಂದ ಬಳಲುತ್ತಿದ್ದ 11 ದಿನದ ಹಸುಳೆಗೆ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈವರೆಗೆ ಮುಂಬೈ, ಬೆಂಗಳೂರಿನಂಥ ಮಹಾನಗರಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದ ಈ ಶಸ್ತ್ರಚಿಕಿತ್ಸೆ ಮಣಿಪಾಲ ದಲ್ಲಿ ನಡೆದಿದ್ದು ಇದೇ ಮೊದಲು.

ಮಣಿಪಾಲ: ಹುಟ್ಟುವಾಗಲೇ ಹೃದಯದ ತೊಂದರೆಯಿಂದ ಬಳಲುತ್ತಿದ್ದ 11 ದಿನದ ಹಸುಳೆಗೆ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈವರೆಗೆ ಮುಂಬೈ, ಬೆಂಗಳೂರಿನಂಥ ಮಹಾನಗರಗಳಲ್ಲಿ ಮಾತ್ರ ನಡೆಸಲಾಗುತ್ತಿದ್ದ ಈ ಶಸ್ತ್ರಚಿಕಿತ್ಸೆ ಮಣಿಪಾಲ ದಲ್ಲಿ ನಡೆದಿದ್ದು ಇದೇ ಮೊದಲು.

ಬ್ರಹ್ಮಾವರದ ಹರೀಶ್ ಮತ್ತು ಪೂರ್ಣಿಮಾ ದಂಪತಿಯ ಈ ಮಗು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ್ದು, ಅಳುವಾಗ ಮೈಯೆಲ್ಲಾ ನೀಲಿ ಬಣ್ಣಕ್ಕೆ ತಿರುಗುತಿತ್ತು ಮತ್ತು ಉಸಿರಾಟಕ್ಕೆ ತೊಂದರೆಪಡುತ್ತಿತ್ತು. ಅಲ್ಲಿನ ವೈದ್ಯರು ಒಂದು ದಿನದ ಈ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದರು. ಮಗುವಿನ ಹೃದಯ ನಾಳಗಳು ಸ್ಥಾನ ಪಲ್ಲಟಗೊಂಡಿರುವುದನ್ನು 24 ಗಂಟೆಗಳಲ್ಲೇ ಪತ್ತೆಹಚ್ಚಿದ ಕೆಎಂಸಿ ವೈದ್ಯರು ಕೂಡಲೇ ಚಿಕಿತ್ಸೆ ಆರಂಭಿಸಿದ್ದರು.

ಈ ಮಗುವನ್ನು ಬೆಂಗಳೂರಿಗೆ ಕಳುಹಿಸಲು ಸಿದ್ಧತೆಗಳನ್ನು ನಡೆಸುತ್ತಿರು ವಾಗಲೇ ಕೆಎಂಸಿಗೆ ನೂತನ ಹೃದಯ ಶಸ್ತ್ರಚಿಕಿತ್ಸಕರಾಗಿ ಸೇರಿದ ಡಾ.ಅರವಿಂದ ಬಿಷ್ಣೋಯಿ ಅವರು ಮಗುವಿನ ಶಸ್ತ್ರಚಿಕಿತ್ಸೆಯ ಹೊಣೆಯನ್ನು ಹೊತ್ತು ಜ.23ರಂದು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈಗ ಮಗು ಸಂಪೂರ್ಣವಾಗಿ ಚೇತರಿ ಸಿಕೊಂಡಿದ್ದು, ಗುರುವಾರ ಆಸ್ಪತ್ರೆ ಯಿಂದ ಬಿಡುಗಡೆಗೊಂಡಿದೆ.

ಇಂತಹ ತೊಂದರೆ ಇರುವ ಮಗುವನ್ನು ಹುಟ್ಟಿದ 15 ದಿನಗಳೊಗೆ ಶಸ್ತ್ರಚಿಕಿತ್ಸೆಗೊಳಪಡಿಸಲೇಬೇಕು, ಇಲ್ಲದಿದ್ದಲ್ಲಿ ತಿಂಗಳಲ್ಲಿ ಮಗು ಸಾವಿಗೀಡಾಗುತ್ತದೆ. ಅಪರೂಪದ ಪ್ರಕರಣ ಗಳಲ್ಲಿ ಮಾತ್ರ ಕೆಲ ಮಕ್ಕಳು ಗರಿಷ್ಠ 1 ವರ್ಷದವರೆಗೆ ಬದುಕುಳಿದ ಉದಾಹರಣೆಗಳಿವೆ ಎಂದು ಡಾ.ಅರವಿಂದ ಬಿಷ್ಣೋಯಿ ತಿಳಿಸಿದ್ದಾರೆ.

click me!