ಆನ್’ಲೈನ್ ಮೂಲಕ ಉದ್ಯಮಿಗೆ 63 ಲಕ್ಷ ರು.ವಂಚನೆ

By Suvarna Web DeskFirst Published Jan 29, 2018, 10:40 AM IST
Highlights

ಇ-ಮೇಲ್ ವಿಳಾಸದಲ್ಲಿನ ಒಂದ ಅಕ್ಷರ ನೋಡದೆ ಆನ್‌ಲೈನ್ ವಂಚಕರು ನೀಡಿದ ಖಾತೆಗೆ ಉದ್ಯಮಿಯೊಬ್ಬರು 63 ಲಕ್ಷ ಹಣ ಜಮೆ ಮಾಡಿ ವಂಚನೆಗೊಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜನವರಿ14 ರಂದು ಈ ಆನ್‌ಲೈನ್ ವಂಚನೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು: ಇ-ಮೇಲ್ ವಿಳಾಸದಲ್ಲಿನ ಒಂದ ಅಕ್ಷರ ನೋಡದೆ ಆನ್‌ಲೈನ್ ವಂಚಕರು ನೀಡಿದ ಖಾತೆಗೆ ಉದ್ಯಮಿಯೊಬ್ಬರು 63 ಲಕ್ಷ ಹಣ ಜಮೆ ಮಾಡಿ ವಂಚನೆಗೊಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಜನವರಿ14 ರಂದು ಈ ಆನ್‌ಲೈನ್ ವಂಚನೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಉದ್ಯಮಿ ಸಾದ್ ಸಲ್ಮಾನ್ ಎಂಬುವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾದ್ ಸಲ್ಮಾನ್ ಅವರು ‘ಇಂಡಿಯನ್ ಡಿಸೈನ್ ಎಕ್ಸ್‌ಪರ್ಟ್ ಪ್ರೈ.ಲಿ.’ ಕಂಪನಿ ಹೊಂದಿದ್ದು, ವಿದೇಶದಲ್ಲಿರುವ ಕಂಪನಿಗಳಿಂದ ತಮ್ಮ ಉತ್ಪನ್ನಗಳಿಗಾಗಿ ಕಚ್ಛಾ ಸಾಮಾಗ್ರಿ ಆಮದು ಮಾಡಿಕೊ ಳ್ಳುತ್ತಾರೆ.

 ಇಕ್ಸಿಂಗ್ ಜೋಂಗ್ಡಾ ಟೆಕ್ಸ್‌ಟೈಲ್ ಎಂಬ ವಿದೇಶಿ ಕಂಪನಿ ಜತೆ ಉದ್ಯಮಿ ವ್ಯವಹಾರ ಹೊಂದಿದ್ದರು. ಸಲ್ಮಾನ್ ಅವರು ನಿರಂತರವಾಗಿ mayzhao@zhongdatex.com.cn Ë ವಿಳಾಸದ ಜತೆ ವ್ಯವಹರಿಸುತ್ತಿದ್ದರು. ಎಷ್ಟು ಆಮದು ಮಾಡಿಕೊಳ್ಳಬೇಕು, ಯಾವಾಗ ಪೂರೈಕೆ ಯಾಗುತ್ತದೆ ಎಂಬುದೆಲ್ಲಾ ಇ-ಮೇಲ್ ಮೂಲಕವೇ ನಡೆಯುತ್ತಿತ್ತು. ಡಿ. 14 ರಂದು ಇ- ಮೇಲ್‌ನಿಂದ ಸಂದೇಶ ಬಂದಿತ್ತು. ಈ ಮೇಲ್‌ನ ಕೊನೆಯ á mayzhao@ zhongdatex.cn.com ಅಕ್ಷರವನ್ನು ಅದಲು-ಬದಲು ಮಾಡಿದ್ದರು.

 ಅದರಲ್ಲಿ ತಮ್ಮ ಬ್ಯಾಂಕ್ ಖಾತೆ ಬದಲಾಗಿದ್ದು, ಹೊಸ ಖಾತೆಗೆ ಹಣ ವರ್ಗಾಯಿಸುವಂತೆ ತಿಳಿಸಲಾಗಿತ್ತು. ಸಲ್ಮಾನ್ ಅವರು ಇ-ಮೇಲ್ ವಿಳಾಸವನ್ನು ಸರಿಯಾಗಿ ನೋಡದೆ ದುಷ್ಕರ್ಮಿಗಳು ನೀಡಿದ್ದ ಬ್ಯಾಂಕ್ ಖಾತೆಗೆ ಉದ್ಯಮಿ ಸಲ್ಮಾನ್ ಅವರು 63.75 ಲಕ್ಷ ಹಣ ಜಮೆ ಮಾಡಿದ್ದರು.

ಹಣ ವರ್ಗಾವಣೆ ಮಾಡಿರುವ ಬಗ್ಗೆ ನಿಜವಾದ ಕಂಪನಿಗೆ ಸಲ್ಮಾನ್ ವರ್ಗಾವಣೆ ಮಾಡಿರುವ ಬಗ್ಗೆ ತಿಳಿಸಿದ್ದರು. ಹಣ ವರ್ಗಾವಣೆಯಾಗದ ಬಗ್ಗೆ ವಿದೇಶದ ಕಂಪನಿ ಸಲ್ಮಾನ್ ಅವರಿಗೆ ತಿಳಿಸಿದ್ದಾರೆ. ಈ ವೇಳೆ ನಕಲಿ ಇ-ಮೇಲ್‌ನಿಂದ ಬಂದ ಮಾಹಿತಿ ಪಡೆದು ಮೊಸ ಹೋಗಿರುವುದು ಗಮನಕ್ಕೆ ಬಂದಿದೆ ಎಂದು ಸೈಬರ್ ಪೊಲೀಸರು ಹೇಳಿದರು. ಈ ಸಂಬಂಧ ಆರೋಪಿಗಳ ಬ್ಯಾಂಕ್ ಖಾತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸೈಬರ್ ಕ್ರೈಂ ಪೊಲೀಸರು ಹೇಳಿದರು.

click me!