ಓಮರ್, ಮೆಹಬೂಬಾ ನಿರಾಳರಾದರು: ಭೇಟಿಗೆ ನೆಂಟರಿಷ್ಟರು ಬಂದರು!

By Web DeskFirst Published Sep 1, 2019, 3:45 PM IST
Highlights

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ| ಸಂಬಂಧಿಕರನ್ನು ಭೇಟಿ ಮಾಡಲು ಓಮರ್, ಮೆಹಬೂಬಾಗೆ ಅನುಮತಿ| ಶ್ರೀನಗರದ ಚಶ್ಮಾಶಾಹಿ ರೆಸಾರ್ಟ್‌ನಲ್ಲಿ ಮೆಹಬೂಬಾ ಭೇಟಿಯಾದ ತಾಯಿ, ಸಹೋದರಿ| ಶ್ರೀನಗರದ ಹರಿನಿವಾಸದಲ್ಲಿ ಓಮರ್ ಭೇಟಿಯಾದ ಸಹೋದರಿ ಸಫಿಯಾ| ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಜಮ್ಮು ಮತ್ತು ಕಾಶ್ಮೀರ| 

ಶ್ರೀನಗರ(ಸೆ.01): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಮುಂಜಾಗ್ರತಾ ಕ್ರಮವಾಗಿ ಗೃಹ ಬಂಧನದಲ್ಲಿರಿಸಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಅವರಿಗೆ ಸಂಬಂಧಿಕರನ್ನು ಬೇಟಿ ಮಾಡಲು ಅವಕಾಶ ನೀಡಲಾಗಿದೆ.

ಶ್ರೀನಗರದ ಚಶ್ಮಾಶಾಹಿ ರೆಸಾರ್ಟ್‌ನಲ್ಲಿ ಮೆಹಬೂಬಾ ಮುಫ್ತಿಯನ್ನು ಗೃಹಬಂಧನದಲ್ಲಿರಿಸಲಾಗಿದ್ದು, ತಾಯಿ ಮತ್ತು ಸಹೋದರಿ ರುಬ್ಯಾ ಸಯೀದ್ ಮೆಹಬೂಬಾ ಮುಫ್ತಿ ಅವರನ್ನು ಭೇಟಿಯಾಗಿದ್ದಾರೆ.

ಶ್ರೀನಗರದ ಹರಿನಿವಾಸದಲ್ಲಿರುವ ಒಮರ್ ಅಬ್ದುಲ್ಲಾ ಅವರ ನಿವಾಸಕ್ಕೆ ಸಹೋದರಿ ಸಫಿಯಾ ಮತ್ತು ಅವರ ಮಕ್ಕಳ ಭೇಟಿಗೆ ಅವಕಾಶ ನೀಡಲಾಗಿತ್ತು. ಕುಟುಂಬಸ್ಥರು ಸುಮಾರು 8 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು, ಭದ್ರತೆಯ ಕಾರಣಕ್ಕೆ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಮಾಜಿ ಸಿಎಂ ಹಾಗೂ ಎನ್’ಸಿ ನಾಯಕ ಒಮರ್ ಅಬ್ದುಲ್ಲಾ ಮತ್ತು ಇತರ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ.

click me!