ಒಬಾಮ ವೈಯಕ್ತಿಕ ಇಮೇಲ್ ಹ್ಯಾಕ್

By Web DeskFirst Published Oct 22, 2016, 3:02 PM IST
Highlights

ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್'ನ ಕೆಲ ವೈಯುಕ್ತಿಕ ಮಾಹಿತಿಸೋರಿಕೆಯಾಗಿದೆ

ವಾಷಿಂಗ್ಟನ್(ಅ.22): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್  ಹ್ಯಾಕ್ ಮಾಡಲಾಗಿದ್ದು, ಈ ಬಗ್ಗೆ ಸ್ವತಃ ವಿಕಿಲೀಕ್ಸ್ ಸಂಸ್ಥೆ ಟ್ವೀಟ್ ಮಾಡಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ವೈಯಕ್ತಿಕ ಇಮೇಲ್'ನ ಕೆಲ ವೈಯುಕ್ತಿಕ ಮಾಹಿತಿ  ಸೋರಿಕೆಯಾಗಿದೆ ಎಂದು ಹೇಳಿದೆ. 2008 ನವೆಂಬರ್ 4 ರ ಸಂಜೆ ಬರಾಕ್ ಒಬಮಾ ಅವರು ಜಾನ್ ಪೊಡೆಸ್ಚಾ ಅವರಿಗೆ ಬರೆದಿದ್ದ ಇಮೇಲ್ ಸೋರಿಕೆಯಾಗಿರುವುದಾಗಿ ತಿಳಿಸಿದೆ.  ಪೊಡಾಸ್ಟಾ ಹಾಗೂ ಒಬಾಮ ಅವರ ನಡುವೆ ನಡೆದಿದೆ ಎನ್ನಲಾದ ಸುಮಾರು 23 ಸಾವಿರ ಇಮೇಲ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

click me!