‘ನಾನು ಮುಸ್ಲಿಂ, ನಾನು ಬಲವಂತದ ಮತಾಂತರ ಅಗಿಲ್ಲ: ಹಾದಿಯಾ

By Suvarna web DeskFirst Published Nov 26, 2017, 11:27 AM IST
Highlights

ಕೇರಳದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ.27ರಂದು ಸುಪ್ರೀಂ ಕೋರ್ಟಿಗೆ ಹಾಜರಾಗಲಿರುವ ಕೇರಳದ ಮಹಿಳೆ ಹಾದಿಯಾ, ತಾನು ಬಲವಂತವಾಗಿ ಮತಾಂತರ ಹೊಂದಿಲ್ಲ. ತನ್ನದು ಲವ್ ಜಿಹಾದ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ಕೊಟ್ಟಾಯಂ: ಕೇರಳದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ.27ರಂದು ಸುಪ್ರೀಂ ಕೋರ್ಟಿಗೆ ಹಾಜರಾಗಲಿರುವ ಕೇರಳದ ಮಹಿಳೆ ಹಾದಿಯಾ, ತಾನು ಬಲವಂತವಾಗಿ ಮತಾಂತರ ಹೊಂದಿಲ್ಲ. ತನ್ನದು ಲವ್ ಜಿಹಾದ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

ಕೋರ್ಟಿಗೆ ಹಾಜರಾಗಲು ದಿಲ್ಲಿಗೆ ಹೊರಟ ಹಾದಿಯಾ ನೆಡುಂಬಾಸ್ಸೆರಿ ವಿಮಾನ ನಿಲ್ದಾಣದಲ್ಲಿ ತನಗೋಸ್ಕರ ಕಾಯುತ್ತಿದ್ದ ಸುದ್ದಿಗಾರರ ಜತೆ ಮಾತನಾಡಿದಳು.

ಮೂಲತಃ ಹಿಂದು ಧರ್ಮೀಯಳಾದ ಅಖಿಲಾ ಅಲಿಯಾಸ್ ಹದಿಯಾ, ‘ನಾನು ಮುಸ್ಲಿಂ. ನಾನು ಬಲವಂತದ ಮತಾಂತರ ಅಗಿಲ್ಲ. ನಾನು ನನ್ನ ಪತಿಯ ಜತೆಗೇ ಇರಬಯಸುವೆ’ ಎಂದು ಹಿಜಾಬ್ ಧರಿಸಿದ್ದ ಹಾದಿಯಾ ಹೇಳಿದಳು.

ಹಾದಿಯಾ ಇಷ್ಟು ಹೇಳುತ್ತಿದ್ದಂತೆಯೇ ಪೊಲೀಸರು ಹಾಗೂ ಪಾಲಕರು ಕೂಡಲೇ ಆಕೆಯನ್ನು ಕೈಹಿಡಿದು ಎಳೆದೊಯ್ದರು. ಹಾದಿಯಾ ಪ್ರಕರಣವು ನಿಜವಾಗಿಯೂ ಲವ್ ಜಿಹಾದ್ ಹೌದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಕೆ ತನ್ನ ಮುಂದೆ ನ.27ರಂದು ಖುದ್ದು ಹಾಜರಾಗಬೇಕೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ ಅವರ ಪೀಠ ಆದೇಶಿಸಿತ್ತು.

ಭಾನುವಾರ ಹಾದಿಯಾ ಕುಟುಂಬ ಸೋನವಾರ ಕೋರ್ಟಿಗೆ ಹಾಜರಾಗಲಿದೆ.

click me!