
ವಾಷಿಂಗ್ಟನ್(ಅ.18): ಅಮೆರಿಕವನ್ನು ಸರ್ವನಾಶ ಮಾಡಲು ಒಂದಿಲ್ಲೊಂದು ಬೆದರಿಕೆ ಒಡ್ಡುತ್ತಿರುವ ಉತ್ತರ ಕೊರಿಯಾ, ಈಗ ತನ್ನ ಬದ್ಧವೈರಿ ದೇಶದ ಮೇಲೆ ‘ಇಎಂಪಿ ಬಾಂಬ್’ ಪ್ರಯೋಗ ಮಾಡಬಹುದು ಎಂಬ ಎಚ್ಚರಿಕೆ ತಜ್ಞರಿಂದ ಬಂದಿದೆ. ಈ ದಾಳಿ ನಡೆದರೆ ಅಮೆರಿಕದ ವಿದ್ಯುತ್ ಗ್ರಿಡ್‌ಗಳು ಸ್ತಬ್ಧವಾಗಲಿದ್ದು, ವಿದ್ಯುತ್ ಹಾಗೂ ವಿದ್ಯುನ್ಮಾನ ವ್ಯವಸ್ಥೆಯ ಮೇಲೆಯೇ ಅವಲಂಬಿತವಾಗಿರುವ ಶೇ.90ರಷ್ಟು ಅಮೆರಿಕನ್ನರು 1 ವರ್ಷದ ಅವಧಿಯಲ್ಲಿ ಸಾವನ್ನಪ್ಪಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ.
‘ನ್ಯೂಕ್ಲಿಯರ್ ಇಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್’ ಎಂಬುದು ಇಎಂಪಿ ಬಾಂಬ್'ನ ಸವಿಸ್ತಾರ ರೂಪ. ಅಣು ಸ್ಫೋಟದಿಂದ ಹೊರಹೊಮ್ಮಿದ ರೇಡಿಯೋ ತರಂಗಗಳು ಇಎಂಪಿ ಬಾಂಬ್ ಪ್ರಯೋಗದಿಂದ ಬಿಡುಗಡೆಯಾಗುತ್ತವೆ. ಇವುಗಳಿಂದ ವಿದ್ಯುತ್ ಹಾಗೂ ವಿದ್ಯುನ್ಮಾನ ವ್ಯವಸ್ಥೆಯು ಸಂಪೂರ್ಣ ಹಾಳಾಗುತ್ತದೆ. ಈ ಅಪಾಯ ಸಂ‘ವಿಸಿದರೆ ಪರೋಕ್ಷವಾಗಿ ಶೇ.90ರಷ್ಟು ಅಮೆರಿಕನ್ನರು 1 ವರ್ಷದಲ್ಲಿ ಸಾಯುತ್ತಾರೆ ಎಂದು ಅಮೆರಿಕದ ಇಎಂಪಿ ಕಮಿಶನ್ ನ ತಜ್ಞರಾದ ಡಾ| ವಿಲಿಯಂ ಗ್ರಹಾಂ ಹಾಗೂ ಡಾ| ಪೀಟರ್ ವಿನ್ಸೆಂಟ್ ಪ್ರಾಯ್ ಅವರು ‘ಉತ್ತರ ಕೊರಿಯಾ
ಇಎಂಪಿ ದಾಳಿ:
ಅಸ್ತಿತ್ವ ಬೆದರಿಕೆ’ ಎಂಬ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅಮರಿಕದ ಜನಸಂಖ್ಯೆ 32 ಕೋಟಿ ಇದ್ದು, ಈ ಬಾಂಬ್ ದಾಳಿ ನಡೆದರೆ ಅಂದಾಜು 29 ಕೋಟಿ ಜನ ಸಾವನ್ನಪ್ಪಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ, ಇಎಂಪಿ ಬಾಂಬ್ ಅನ್ನು ಉತ್ತರ ಕೊರಿಯಾ ದಕ್ಷಿಣ ‘ಧ್ರುವದಲ್ಲಿ ಪ್ರಯೋಗಿಸಿದರೆ ಅದರಿಂದ ಬಿಡುಗಡೆಯಾಗುವ ತರಂಗಗಳಿಂದ ಅಮೆರಿಕದ ಇಲೆಕ್ಟ್ರಿಗ್ ಗ್ರಿಡ್'ಗಳ ಅನಿರ್ದಿಷ್ಟ ಅವಧಿಗೆ ಮುಚ್ಚಲ್ಪಡುತ್ತವೆ. ಉತ್ತರ ಕೊರಿಯಾ ಈ ಬಾಂಬ್ ಅನ್ನು ಕ್ಷಿಪಣಿ, ಜಲಾಂತರ್ಗಾಮಿ, ಸಿಡಿತಲೆ ಅಥವಾ ಬಲೂನ್ ಬಳಸಿ ನಡೆಸಬಹುದು. ಕೊನೇ ಪಕ್ಷ ಉತ್ತರ ಕೊರಿಯಾದ ಉಪಗ್ರಹಗಳ ಮೂಲಕವೂ ದಾಳಿ ನಡೆಯಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ದಕ್ಷಿಣ ಕೊರಿಯಾ ಮೇಲೂ ಉ.ಕೊರಿಯಾ ಈ ಪ್ರಯೋಗ ನಡೆಸಬಹುದು. ಹೀಗಾಗಿ ದ.ಕೊರಿಯಾ ಕಟ್ಟೆಚ್ಚರ ವಹಿಸಿದೆ ಎಂದು ವರದಿಯಾಗಿತ್ತು. ‘ಅಮೆರಿಕವನ್ನು ಬೂದಿ ಮಾಡಿಬಿಡುವೆ’ ಎಂಬ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ರಿಂದ ಬಂದಿದ್ದೂ ಇದೇ ಹಿನ್ನೆಲೆಯಲ್ಲಿ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.