ಕೇಂದ್ರ ಸರ್ಕಾರಿ ನೌಕರರಿಗೆ ಶಾಕಿಂಗ್ ನ್ಯೂಸ್

First Published Jun 27, 2018, 10:27 AM IST
Highlights

ನರೇಂದ್ರ ಮೋದಿ ಸರ್ಕಾರವು ಕೇಂದ್ರ  ಸರ್ಕಾರಿ ನೌಕರರಿಗೆ ಶಾಕ್ ನೀಡಿದೆ.7 ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರ ಓವರ್ ಟೈಮ್ ಭತ್ಯೆ ನೀಡದೇ ಇರುವ ನಿರ್ಧಾರ ಕೈಗೊಂಡಿದೆ.

ನವದೆಹಲಿ: ಕೇಂದ್ರದ ನೌಕರರಿಗೆ ಓವರ್ ಟೈಮ್ ಭತ್ಯೆ ನೀಡದೇ ಇರುವ ನಿರ್ಧಾರ ಕೈಗೊಳ್ಳುವ ಮೂಲಕ ನರೇಂದ್ರ ಮೋದಿ ಸರ್ಕಾರವು ಕೇಂದ್ರ  ಸರ್ಕಾರಿ ನೌಕರರಿಗೆ ಶಾಕಿಂಗ್ ನೀಡಿದೆ. 7 ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಹೊರತುಪಡಿಸಿದರೆ ಇತರ ಯಾವುದೇ ಉದ್ಯೋಗಿಗೂ ಓವರ್‌ಟೈಮ್ ಭತ್ಯೆ ನೀಡದೇ ಇರಲು 7 ನೇ ವೇತನ ಆಯೋಗದ ಶಿಫಾರಸಿನಂತೆ ತೀರ್ಮಾನಿಸಲಾಗಿದೆ. 

ಇತ್ತೀಚಿನ ವರ್ಷಗಳಲ್ಲಿ ಗಣನೀಯ ವೇತನ ಏರಿಕೆಯಾಗಿದ್ದು, ಇದನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ಜರುಗಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತ ಸರ್ಕಾರದ ಎಲ್ಲ ಸಚಿವಾಲಯಗಳು, ಹಾಗೂ ಕಚೇರಿಗಳಲ್ಲಿ ಈ ನಿರ್ಣಯ ಜಾರಿಯಾಗಲಿದೆ.

ಒ.ಟಿ.ಗೆ ಷರತ್ತು: ಇದೇ ವೇಳೆ, ಈ ವಿಭಾಗದ ನೌಕರರ ಓವರ್‌ಟೈಂ ಕೆಲಸವನ್ನು ಬಯೋಮೆಟ್ರಿಕ್ ಜತೆಗೆ ಲಿಂಕ್ ಮಾಡಲು ನಿರ್ಧರಿಸಲಾಗಿದೆ. ಹಿರಿಯ ಅಧಿಕಾರಿ ತುರ್ತು ಕೆಲಸದ ನಿಮಿತ್ತ ಇವರನ್ನು ಹೆಚ್ಚಿನ ಅವಧಿಗೆ ಕೆಲಸ ಮಾಡಿಸಿಕೊಳ್ಳಲಾಗಿದೆ ಎಂದು ಲಿಖಿತವಾಗಿ ನೀಡಬೇಕು. ಆಗ ಮಾತ್ರ ಒ.ಟಿ. ಭತ್ಯೆ ಪಡೆಯಲು ನೌಕರರು ಅರ್ಹರು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

click me!