
ಕೋಲ್ಕತಾ : ‘ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಭಯ ಇದ್ದು, ಹೀಗಾಗಿ ಅವರ ಕುರಿತು ಯಾವುದೇ ಜೋಕ್ ಮಾಡುತ್ತಿಲ್ಲ’ ಎಂದು ದೇಶದ ಖ್ಯಾತ ಹಾಸ್ಯ ಕಲಾವಿದ ಸೈರಸ್ ಬ್ರೋಚಾ ಹೇಳಿದ್ದಾರೆ. ಅಲ್ಲದೆ, ದೇಶದಲ್ಲಿ ಈಗ ಸೋವಿಯತ್ ಒಕ್ಕೂಟದಲ್ಲಿ ಇದ್ದಂಥ ವಾತಾವರಣವಿದೆ ಎಂದೂ ಆರೋಪಿಸಿದ್ದಾರೆ.
ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಈ ಹಿಂದೆ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಅವರು ಜೀವಂತವಿದ್ದಾಗ ಅವರ ಬಗ್ಗೆ ಕಲಾವಿದರು ಜೋಕ್ ಮಾಡಲು ಹೆದರುತ್ತಿದ್ದರು. ಮಹಾತ್ಮಾ ಗಾಂಧೀಜಿ ಕುರಿತೂ ಯಾರೂ ಜೋಕ್ ಮಾಡುತ್ತಿರಲಿಲ್ಲ. ಈಗ ಅಮಿತ್ ಶಾ ಅವರಿಗೆ ಹೆದರುತ್ತಿದ್ದೇವೆ’ ಎಂದರು.
‘ಈ ಹಿಂದೆ ಜಯಲಲಿತಾ ಬಗ್ಗೆ ಜೋಕ್ ಮಾಡಿದ್ದಕ್ಕೆ ನನಗೆ 3 ವರ್ಷ ಚೆನ್ನೈಗೆ ಕಾಲಿಡಲು ಆಗಿರಲಿಲ್ಲ’ ಎಂದೂ ಮೆಲುಕು ಹಾಕಿದ ಸೈರಸ್, ‘ಏನೇ ಇದ್ದರೂ ಕೊನೆಗೆ ಬದುಕುವುದು ಮಹತ್ವದ್ದು. ನಮಗೆ ಈಗ ಸೋವಿಯತ್ ಒಕ್ಕೂಟದಲ್ಲಿ ಇದ್ದಂಥ ಅನುಭವವಾಗುತ್ತಿದೆ’ ಎಂದು ಮಾರ್ಮಿಕವಾಗಿ ನುರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.