ಮೂಢನಂಬಿಕೆ ಬದಿಗೊತ್ತಿ 29 ವರ್ಷಗಳ ಬಳಿಕ ಯುಪಿ ಸಿಎಂ ನೋಯ್ಡಾಗೆ

By Suvarna Web DeskFirst Published Dec 24, 2017, 11:15 AM IST
Highlights

ಅಪಶಕುನ ಮೆಟ್ಟಿ ನಿಂತ ಯೋಗಿ ಆದಿತ್ಯನಾತ್

ರಾಜ್ಯದ ಚಾಮರಾಜನಗರದಂತೆ ನೋಯ್ಡಾಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರಂಬ ಮೂಢ ನಂಬಿಕೆ.

ನೋಯ್ಡಾ: ಕರ್ನಾಟಕದಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇರುವಂತೆ, ಉತ್ತರ ಪ್ರದೇಶದಲ್ಲಿ ನೋಯ್ಡಾಕ್ಕೆ ಅಂಟಿದ್ದ ೨೯ ವರ್ಷಗಳ ಅಪಶಕುನವನ್ನು ಮೆಟ್ಟಿನಿಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್ ಆ ನಗರಕ್ಕೆ ಶನಿವಾರ ಭೇಟಿ ನೀಡಿದ್ದಾರೆ.

ನೋಯ್ಡಾದಲ್ಲಿ ದೆಹಲಿ ಮೆಟ್ರೋದ ಮೊದಲ ಅಂತರ್ ಬದಲಾವಣೆ ನಿಲ್ದಾಣದ ಉದ್ಘಾಟನೆಗೆ ಮೋದಿ ಅವರ ಆಗಮನದ ಪೂರ್ವಭಾವಿಯಾಗಿ ಆದಿತ್ಯನಾಥ್ ನೋಯ್ಡಾಕ್ಕೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದ್ದಾರೆ. 1988ರ ಜೂನ್‌ನಲ್ಲಿ ಅಂದಿನ ಮುಖ್ಯ ಮಂತ್ರಿ ವೀರ್ ಬಹಾದೂರ್ ನೋಯ್ಡಾಕ್ಕೆ ಭೇಟಿ ನೀಡಿ ಹಿಂದಿರುಗಿದ ಕೂಡಲೇ ಕೇಂದ್ರದ ನಾಯಕತ್ವ ಅವರಿಂದ ರಾಜೀನಾಮೆ ಪಡೆದಿತ್ತು. ಹಾಗೆಯೇ ಮಾಯಾವತಿ 2002-2007ರ ಅವಧಿಯಲ್ಲಿ ಹೋಗಿ ಬಂದ ಬಳಿಕ ಮತ್ತೆ ಅಧಿಕಾರಕ್ಕೆ ಏರಿಲ್ಲ. 

Latest Videos

ಕರ್ನಾಟಕದಲ್ಲಿ ಚಾಮರಾಜನಗರಕ್ಕೆ ಅಂಟಿದ್ದ ಇದೇ ರೀತಿಯ ಕಳಂಕವನ್ನು ಅಲ್ಲಿಗೆ ಭೇಟಿ ನೀಡಿ ಸಿಎಂ ಸಿದ್ದರಾಮಯ್ಯ ಕಳಚಲು ಯತ್ನಿಸಿದ್ದರು.
 

click me!