ಆಂಧ್ರ, ತೆಲಂಗಾಣದಲ್ಲಿ ಯಾಸಿನ್'ನ್ನು ಗಲ್ಲಿಗೇರಿಸುವವರೇ ಇಲ್ಲ..!

Published : Dec 22, 2016, 03:00 PM ISTUpdated : Apr 11, 2018, 12:55 PM IST
ಆಂಧ್ರ, ತೆಲಂಗಾಣದಲ್ಲಿ ಯಾಸಿನ್'ನ್ನು ಗಲ್ಲಿಗೇರಿಸುವವರೇ ಇಲ್ಲ..!

ಸಾರಾಂಶ

‘‘ದೀರ್ಘಕಾಲದಿಂದ ನಮ್ಮಲ್ಲಿ ಗಲ್ಲಿಗೇರಿಸುವ ಪ್ರಕರಣಗಳು ಬಂದಿಲ್ಲ. ಹೀಗಾಗಿ ಗಲ್ಲಿಗೇರಿಸುವ ಹುದ್ದೆ ಹಾಗೆಯೇ ಭರ್ತಿಯಾಗದೆಯೇ ಉಳಿದಿದೆ. ಆದರೆ, ಕಾರಾಗೃಹಗಳನ್ನು ಆಧುನೀಕರಣಗೊಳಿಸಿದ್ದೇವೆ,’’ ಎಂದು ತೆಲಂಗಾಣದ ಬಂದೀಖಾನೆ ವಿಭಾಗದ ಐಜಿಪಿ ನರಸಿಂಹ ತಿಳಿಸಿದ್ದಾರೆ.

ಹೈದರಾಬಾದ್(ಡಿ.22): ಹೈದರಾಬಾದ್‌'ನ ದಿಲ್‌ಸುಖ್‌'ನಗರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್‌ಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಯಾವುದೇ ಕಾರಾಗೃಹಗಳಲ್ಲಿ ಗಲ್ಲಿಗೇರಿಸುವ ವ್ಯಕ್ತಿಗಳ ಹುದ್ದೆ ಭರ್ತಿಯಾಗಿಯೇ ಇಲ್ಲ. ಅಲ್ಲಿನ ಸರ್ಕಾರಗಳು ಅವುಗಳನ್ನು ಭರ್ತಿ ಮಾಡುವ ಗೋಜಿಗೇ ಹೋಗಿಲ್ಲ ಎಂದು ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.

‘‘ದೀರ್ಘಕಾಲದಿಂದ ನಮ್ಮಲ್ಲಿ ಗಲ್ಲಿಗೇರಿಸುವ ಪ್ರಕರಣಗಳು ಬಂದಿಲ್ಲ. ಹೀಗಾಗಿ ಗಲ್ಲಿಗೇರಿಸುವ ಹುದ್ದೆ ಹಾಗೆಯೇ ಭರ್ತಿಯಾಗದೆಯೇ ಉಳಿದಿದೆ. ಆದರೆ, ಕಾರಾಗೃಹಗಳನ್ನು ಆಧುನೀಕರಣಗೊಳಿಸಿದ್ದೇವೆ,’’ ಎಂದು ತೆಲಂಗಾಣದ ಬಂದೀಖಾನೆ ವಿಭಾಗದ ಐಜಿಪಿ ನರಸಿಂಹ ತಿಳಿಸಿದ್ದಾರೆ.

ಆಂಧ್ರಪ್ರದೇಶ ವಿಭಜನೆಯಾಗುವುದಕ್ಕಿಂತ ಮೊದಲು ರಾಜಮಂಡ್ರಿ ಮತ್ತು ವಿಶಾಖಪಟ್ಟಣದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸುವ ವ್ಯವಸ್ಥೆ ಇತ್ತು. ಆಂಧ್ರಪ್ರದೇಶದ ರಾಜಮಂಡ್ರಿಯ ಕಾರಾಗೃಹದಲ್ಲಿ 1976ರ ಫೆಬ್ರವರಿಯಲ್ಲಿ ಗಲ್ಲಿಗೇರಿಸಿದ್ದೇ ಕೊನೆಯ ಪ್ರಕರಣ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?